ADVERTISEMENT

ಪೌರತ್ವ ಮಸೂದೆ ವಿರೋಧಿಸಿ ಬೀದಿಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳಿಗೆ ಪೊಲೀಸ್ ತಡೆ

ಏಜೆನ್ಸೀಸ್
Published 13 ಡಿಸೆಂಬರ್ 2019, 14:13 IST
Last Updated 13 ಡಿಸೆಂಬರ್ 2019, 14:13 IST
ಜಾಮಿಯಾ ವಿವಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಸಂಘರ್ಷ  (ರಾಯಿಟರ್ಸ್ ಚಿತ್ರ)
ಜಾಮಿಯಾ ವಿವಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಸಂಘರ್ಷ (ರಾಯಿಟರ್ಸ್ ಚಿತ್ರ)   

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಶುಕ್ರವಾರಸಂಸತ್‌ ಭವನಕ್ಕೆಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿದ್ದಾರೆ.

ಸಂಸತ್ ಭವನದ ಪರಿಸರದಲ್ಲಿ ಗುಂಪು ಸೇರುವುದನ್ನು ನಿರ್ಬಂಧಿಸಿದ್ದು, 50 ಮಂದಿ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶ್ವವಿದ್ಯಾನಿಲಯದ ಆವರಣದಿಂದ ವಿದ್ಯಾರ್ಥಿಗಳು ಮೆರವಣಿಗೆ ಆರಂಭ ಮಾಡುತ್ತಿದ್ದಂತೆ ಪ್ರತಿಭಟನಕಾರರನ್ನು ಚದುರಿಸುವುದಕ್ಕಾಗಿ ದೆಹಲಿ ಪೊಲೀಸರು ಅಶ್ರು ವಾಯು ಮತ್ತು ಲಾಠಿ ಪ್ರಯೋಗ ನಡೆಸಿದ್ದಾರೆ.

ವಿದ್ಯಾರ್ಥಿಗಳು ಸಂಸತ್ತಿಗೆ ತಲುಪದಂತೆ ತಡೆಯಲು ದೆಹಲಿ ಮೆಟ್ರೊ ರೈಲು ಕಾರ್ಪರೇಷನ್ (ಡಿಎಂಆರ್‌ಸಿ) ಪಟೇಲ್ ಚೌಕ್ ಮತ್ತು ಜನಪಥ್ ನಿಲ್ದಾಣವನ್ನುಕೆಲವು ಗಂಟೆಗಳ ಕಾಲ ಮುಚ್ಚಿತ್ತು.

ಇದೀಗ ಈ ಎರಡೂ ನಿಲ್ದಾಣದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿದೆ ಡಿಎಂಆರ್‌ಸಿ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.