ADVERTISEMENT

ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ಗವರ್ನರ್ ಚಾಲನೆ

ಪಿಟಿಐ
Published 30 ಜೂನ್ 2023, 4:34 IST
Last Updated 30 ಜೂನ್ 2023, 4:34 IST
ಬಿಗಿ ಭದ್ರತೆಯಲ್ಲಿ ನಾಳೆಯಿಂದ ಅಮರನಾಥ ಯಾತ್ರೆ ಆರಂಭ (ಪ್ರಾತಿನಿಧಿಕ ಚಿತ್ರ)
ಬಿಗಿ ಭದ್ರತೆಯಲ್ಲಿ ನಾಳೆಯಿಂದ ಅಮರನಾಥ ಯಾತ್ರೆ ಆರಂಭ (ಪ್ರಾತಿನಿಧಿಕ ಚಿತ್ರ)   

ಜಮ್ಮು: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ವಾರ್ಷಿಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರ ಮೊದಲ ತಂಡಕ್ಕೆ ಇಲ್ಲಿನ ಭಗವತಿ ನಗರ್‌ ಶಿಬಿರದಲ್ಲಿ ಚಾಲನೆ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಹಿಮಾಲಯದ 3,800 ಮೀಟರ್‌ನಷ್ಟು ಎತ್ತರದ ಪ್ರದೇಶದಲ್ಲಿರುವ ಶಿವನ ಗುಹಾ ದೇಗುಲಕ್ಕೆ ತೀರ್ಥಯಾತ್ರೆ ಕೈಗೊಳ್ಳಲು 3,400ಕ್ಕೂ ಅಧಿಕ ಯಾತ್ರಿಕರನ್ನೊಳಗೊಂಡ ಮೊದಲ ತಂಡ ಕಾಶ್ಮೀರದ ಮೂಲ ಶಿಬಿರಗಳಿಗೆ ಭಾರಿ ಭದ್ರತೆಯ ನಡುವೆ ತೆರಳಿದೆ.

62 ದಿನಗಳ ಈ ಯಾತ್ರೆಯು ಕಾಶ್ಮೀರದ ಅನಂತ ನಾಗ್‌ ಜಿಲ್ಲೆಯಲ್ಲಿರುವ ನುವಾನ್-ಪಹಲ್ಗಾಮ್‌ನ ಅವಳಿ ಮಾರ್ಗದ ಮೂಲಕ ಶನಿವಾರ ಆರಂಭವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.