
ಪಿಟಿಐ
ಶ್ರೀನಗರ: ‘ಜಮ್ಮು–ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನವೊಂದು(ಐಇಡಿ) ಪತ್ತೆಯಾಗಿದ್ದು, ಅದನ್ನು ಸೂಕ್ತ ಸಮಯದಲ್ಲಿ ನಿಷ್ಕ್ರಿಯಗೊಳಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಪುಲ್ವಾಮದ ಸರ್ಕಲ್ ರಸ್ತೆಯಲ್ಲಿ ಭದ್ರತಾ ಪಡೆಗೆ ಐಇಡಿಯೊಂದು ಸಿಕ್ಕಿದೆ. ಬಳಿಕ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಅದನ್ನು ನಾಶಪಡಿಸಲಾಗಿದೆ. ಈ ವೇಳೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಿಲ್ಲ’ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ... ಸುಳ್ಳು ಸುದ್ದಿ ಟ್ವೀಟ್: ಸುಮಿತ್ರಾ ಮಹಾಜನ್ ಕ್ಷಮೆ ಕೋರಿದ ಶಶಿ ತರೂರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.