
ನವದೆಹಲಿ: ‘ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರವನ್ನು ಸೇರ್ಪಡೆಗೊಳಿಸುವ ಬಗ್ಗೆ ಜವಾಹರಲಾಲ್ ನೆಹರೂ ಅವರಿಗೆ ಸಹಮತ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘವಾದ ಉತ್ತರವನ್ನು ನೀಡಿದ್ದಾರೆ.
‘ನೆಹರೂ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಡುವೆ ನಡೆದ ಪತ್ರ ವ್ಯವಹಾರಗಳು ಮತ್ತು ಅಂದಿನ ಕಾಲದ ಸದನದ ಚರ್ಚೆಗಳನ್ನು ಓದಿ ತಿಳಿದುಕೊಳ್ಳಿ. ಕಾಶ್ಮೀರವನ್ನು ಸ್ವತಂತ್ರ ದೇಶವನ್ನಾಗಿಸಬೇಕು ಎಂದವರು ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್‌ನವರು’ ಎಂದು ಖರ್ಗೆ ಅವರು ಮೋದಿ ಅವರುಗೆ ತಿರುಗೇಟು ನೀಡಿದ್ದಾರೆ.
‘ಕಾಶ್ಮೀರದ ಮಹಾರಾದ ಹರಿ ಸಿಂಗ್ ಅವರ ಅತಿಥಿಗಳಾಗಿದ್ದವರು ವಿನಾಯಕ ದಾಮೋದರ್ ಸಾವರ್ಕರ್ ಮತ್ತು ಎಂ.ಎಸ್. ಗೋಲ್ವಾಲ್ಕರ್. ನೆಹರೂ ಅವರ ಬಗ್ಗೆ ಮೋದಿ ಅವರು ಆಡಿದ ಮಾತುಗಳು ಶುದ್ಧ ಸುಳ್ಳಿನಿಂದ ಕೂಡಿವೆ ಮತ್ತು ಖಂಡನೀಯವಾಗಿವೆ’ ಎಂದು ತಮ್ಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.