ADVERTISEMENT

'ಶಾಂತಿದೂತ' ನೆಹರುವಿನಿಂದಾಗಿ ಭಾರತಕ್ಕೆ ಪೆಟ್ಟಾಯಿತು: ಮಹಾರಾಷ್ಟ್ರ ರಾಜ್ಯಪಾಲ

ಪಿಟಿಐ
Published 27 ಜುಲೈ 2021, 5:33 IST
Last Updated 27 ಜುಲೈ 2021, 5:33 IST
ಭಗತ್‌ ಸಿಂಗ್‌ ಕೋಶ್ಯಾರಿ
ಭಗತ್‌ ಸಿಂಗ್‌ ಕೋಶ್ಯಾರಿ   

ಮುಂಬೈ: ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅವರು ತಮ್ಮನ್ನು ತಾವು 'ಶಾಂತಿದೂತ' ಎಂದು ಬಿಂಬಿಸಿಕೊಂಡಿದ್ದರ ಪರಿಣಾಮವನ್ನು ಭಾರತ ಹಲವು ವರ್ಷಗಳ ಕಾಲ ಎದುರಿಸಬೇಕಾಯಿತು ಎಂದು ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ವಿವಾದಿತ ಹೇಳಿಕೆ ನೀಡಿದ್ದಾರೆ.

ರಾಜಭವನದಲ್ಲಿ ಕಾರ್ಗಿಲ್‌ ದಿನದ ಅಂಗವಾಗಿ ಮಾತನಾಡಿದ ಕೋಶ್ಯಾರಿ, 'ಭಾರತ ಸ್ವಾಂತಂತ್ರ್ಯ ಹೋರಾಟಕ್ಕೆ ಮತ್ತು ದೇಶಕ್ಕೆ ನೆಹರು ಕೊಡುಗೆ ಅಪಾರ. ಆದರೆ ತಮ್ಮನ್ನು ತಾವು ಶಾಂತಿದೂತ ಎಂದು ನಂಬಲು ಆರಂಭಿಸಿದರು. ಇದರಿಂದ ರಾಷ್ಟ್ರವು ಹಲವು ವರ್ಷಗಳ ವರೆಗೆ ಪರಿಣಾಮವನ್ನು ಎದುರಿಸಬೇಕಾಯಿತು. ನೆಹರು ಅವರ ಶಾಂತಿ ಸಂದೇಶದಿಂದ ಭಾರತಕ್ಕೆ ಪೆಟ್ಟಾಯಿತು' ಎಂದಿದ್ದಾರೆ.

ಕೋಶ್ಯಾರಿ ಹೇಳಿಕೆಯನ್ನು ಮಹಾರಾಷ್ಟ್ರದ ಸಚಿವ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್‌ ಚೌಹಾಣ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.