ADVERTISEMENT

ನಿಜವಾದ ಪ್ರೀತಿಯ ಸಂಕೇತ; ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ

ಪಿಟಿಐ
Published 23 ಏಪ್ರಿಲ್ 2025, 11:09 IST
Last Updated 23 ಏಪ್ರಿಲ್ 2025, 11:09 IST
<div class="paragraphs"><p>ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ</p></div>

ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ

   

(ಪಿಟಿಐ ಚಿತ್ರ)

ಆಗ್ರಾ: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಇಂದು (ಬುಧವಾರ) ಕುಟುಂಬ ಸಮೇತ ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ಗೆ ಭೇಟಿ ನೀಡಿದ್ದಾರೆ.

ADVERTISEMENT

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಪತ್ನಿ ಉಷಾ ವ್ಯಾನ್ಸ್ ಮತ್ತು ದಂಪತಿಯ ಮೂವರು ಮಕ್ಕಳಾದ ಇವಾನ್, ವಿವೇಕ್ ಮ್ತತು ಮಿರಾಬೆಲ್, ತಾಜ್‌ ಮಹಲ್‌ನ ದೃಶ್ಯ ವೈಭವದಿಂದ ಪುಳಕಿತಗೊಂಡಿದ್ದು, ಸುಮಾರು ಒಂದು ತಾಸು ಕಳೆದಿದ್ದಾರೆ.

'ತಾಜ್ ಮಹಲ್ ನಿಜಕ್ಕೂ ಅದ್ಭುತವಾಗಿದೆ. ನಿಜವಾದ ಪ್ರೀತಿಯ ಸಂಕೇತವಾಗಿದ್ದು, ಮಾನವನ ಕೌಶಲ್ಯ ಮತ್ತು ಮಹಾನ್ ಭಾರತ ದೇಶಕ್ಕೆ ಸಂದ ಗೌರವವಾಗಿದೆ' ಎಂದು ಸಂದರ್ಶಕರ ಪುಸ್ತಕದಲ್ಲಿ ವ್ಯಾನ್ಸ್ ಬರೆದಿದ್ದಾರೆ.

ಇಂದು ಜೈಪುರದಿಂದ ಆಗ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಾನ್ಸ್ ಕುಟುಂಬವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ.

ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ

ಬಳಿಕ ರಸ್ತೆ ಮಾರ್ಗವಾಗಿ ತಾಜ್ ಮಹಲ್‌ಗೆ ಸಂಚರಿಸಿದರು. ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದ ಶಾಲಾ ಮಕ್ಕಳು ಭಾರತ ಹಾಗೂ ಅಮೆರಿಕದ ಧ್ವಜವನ್ನು ಬೀಸುತ್ತಾ ಬರಮಾಡಿಕೊಂಡಿದ್ದಾರೆ.

ವ್ಯಾನ್ಸ್ ಆಗಮನದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿಶೇಷ ರಂಗೋಲಿ ಹಾಗೂ ಮರಳು ಶಿಲ್ಪವನ್ನು ಬಿಡಿಸಲಾಗಿತ್ತು. ದಾರಿಯುದ್ದಕ್ಕೂ ವ್ಯಾನ್ಸ್ ಅವರನ್ನು ಸ್ವಾಗತಿಸಿ ಬೃಹತ್ ಫ್ಲೆಕ್ಸ್ ಹಾಕಲಾಗಿತ್ತು.

ಜೆ.ಡಿ. ವ್ಯಾನ್ಸ್ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ವಿಐಪಿ ಚಲನವಲನದ ಹಿನ್ನೆಲೆಯಲ್ಲಿ 'ಜೀರೊ ಟ್ರಾಫಿಕ್' ವ್ಯವಸ್ಥೆ ಏರ್ಪಡಿಸಲಾಗಿತ್ತು.

ಈ ಮೊದಲು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಜೆ.ಡಿ. ವ್ಯಾನ್ಸ್ ಖಂಡಿಸಿದ್ದರು.

ಕುಟುಂಬ ಸಮೇತ ತಾಜ್ ಮಹಲ್‌ಗೆ ಜೆ.ಡಿ. ವ್ಯಾನ್ಸ್ ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.