ADVERTISEMENT

5 ತಿಂಗಳ ಹಿಂದೆ ಕೋಟಾದಿಂದ ಕಾಣೆಯಾಗಿದ್ದ JEE ವಿದ್ಯಾರ್ಥಿ ಕೇರಳದಲ್ಲಿ ಪತ್ತೆ

ಪಿಟಿಐ
Published 17 ಮಾರ್ಚ್ 2024, 3:20 IST
Last Updated 17 ಮಾರ್ಚ್ 2024, 3:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ: iStock

ಕೋಟಾ: ರಾಜಸ್ಥಾನದ ಕೋಟಾದಿಂದ ಐದು ತಿಂಗಳ ಹಿಂದೆ ಕಾಣೆಯಾಗಿದ್ದ 17 ವರ್ಷದ ಜೆಇಇ ಅಭ್ಯರ್ಥಿಯನ್ನು ಕೇರಳದ ತಿರುವನಂತಪುರದಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ADVERTISEMENT

ಬಿಹಾರ ಮೂಲದ ಯುವಕ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಹಾಸ್ಟೆಲ್ ಕೊಠಡಿಯಿಂದ ಕಾಣೆಯಾಗಿದ್ದ. ಗುರುವಾರ ತಿರುವನಂತಪುರದ ಶಿವಗಿರಿಯಲ್ಲಿ ಆತನನ್ನು ಪತ್ತೆಮಾಡಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆತನಿಗೆ ಕೌನ್ಸಿಲಿಂಗ್ ನಡೆಸಲಾಗುತ್ತಿದೆ.

ಜೆಇಇ ಅಭ್ಯರ್ಥಿಯಾಗಿದ್ದ ವಿದ್ಯಾರ್ಥಿ ಕೋಟಾದ ವಿಜ್ಞಾನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದ. ವಿದ್ಯಾರ್ಥಿ ಕಾಣೆಯಾಗಿದ್ದರ ಬಗ್ಗೆ ಆತನ ತಂದ ನವೆಂಬರ್ 9ರಂದು ದೂರು ದಾಖಲಿಸಿದ್ದರು. ಅಕ್ಟೊಬರ್ 5ರಂದು ಹಾಸ್ಟೆಲ್ ತೊರೆದಿದ್ದ ಮಗ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ಹೇಳಿದ್ದರು.

ಮಾನವ ಕಳ್ಳಸಾಗಣೆ ತಡೆ ಕೋಶವು ವಿದ್ಯಾರ್ಥಿಗಾಗಿ ಶೋಧ ಆರಂಭಿಸಿತ್ತು. ಆದರೆ ಆತ ಮೊಬೈಲ್ ಸಂಖ್ಯೆ ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿ ಬದಲಿಸಿದ್ದರಿಂದ ಪತ್ತೆಹಚ್ಚುವ ಕೆಲಸಕ್ಕೆ ತೊಡಕು ಉಂಟಾಗಿತ್ತು ಎಂದು ಕೋಟಾ ನಗರ ಪೊಲೀಸ್ ವರಿಷ್ಠಾಧಿಕಾರಿ ಅಮೃತ ದುಲ್ಹನ್ ತಿಳಿಸಿದರು.

ಮಾಹಿತಿ ಆಧರಿಸಿ ಮಾರ್ಚ್ 8ರಂದು ಕೇರಳ ತಲುಪಿದ ರಾಜಸ್ಥಾನ ಪೊಲೀಸರ ತಂಡ, ಅಲ್ಲಿ ಶೋಧ ನಡೆಸಿ, ಗುರುವಾರ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿತ್ತು.

ಜೆಇಇ ತಯಾರಿಗೆ ಹಾಗೂ ನೌಕರಿ ಪಡೆಯಲು ಹಲವು ವರ್ಷಗಳು ಬೇಕಾಗಿರುವುದರಿಂದ, ಆನ್‌ಲೈನ್ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಬಯಕೆ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಮುದ್ರ ಇಷ್ಟವಾಗಿದ್ದರಿಂದ ವರ್ಕಳದ ಶಿವಗಿರಿಯಲ್ಲಿರುವ ಕಪ್ಪು ಬೀಚ್‌ಗೆ ಬಂದಿದ್ದ. ವಿದ್ಯಾರ್ಥಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.