ADVERTISEMENT

ಮಸೂದ್ ಸೋದರ ಸೇರಿ 44 ಮಂದಿ ಬಂಧನ

ಪಿಟಿಐ
Published 5 ಮಾರ್ಚ್ 2019, 18:29 IST
Last Updated 5 ಮಾರ್ಚ್ 2019, 18:29 IST
ಮುಫ್ತಿ ಅಬ್ದುರ್ ರೌಫ್
ಮುಫ್ತಿ ಅಬ್ದುರ್ ರೌಫ್   

ಇಸ್ಲಾಮಾಬಾದ್ : ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್‌ನ ಸಹೋದರ ಮುಫ್ತಿ ಅಬ್ದುಲ್‌ ರವೂಫ್‌ ಸೇರಿದಂತೆ 44 ಮಂದಿಯನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿದೆ.

ತನ್ನ ನೆಲದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಾಗತಿಕ ನಾಯಕರಿಂದ ವ್ಯಕ್ತವಾದ ಒತ್ತಡದ ಪರಿಣಾಮ ಪಾಕಿಸ್ತಾನ ಉಗ್ರರನ್ನು ಬಂಧಿಸಿದೆ ಎನ್ನಲಾಗಿದೆ.

ಬಂಧಿತರ ಪೈಕಿ ರವೂಫ್‌ ಹಾಗೂ ಹಮ್ಮದ್ ಅಜರ್ ಅವರ ಹೆಸರುಗಳು ಪಾಕಿಸ್ತಾನಕ್ಕೆ ಭಾರತ ನೀಡಿದ್ದ ದಾಖಲೆಗಳಲ್ಲಿ ಇದ್ದವು.

ADVERTISEMENT

ಪಾಕಿಸ್ತಾನದ ಆಂತರಿಕ ಸಚಿವ ಶಹರ್ಯಾರ್ ಖಾನ್ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಯಾವುದೇ ಒತ್ತಡಕ್ಕೆ ಮಣಿದು ಸರ್ಕಾರ ಈ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಹೇಳಿದ್ದಾರೆ. ರಾಷ್ಟ್ರೀಯ ಕ್ರಿಯಾಯೋಜನೆ ಅನ್ವಯ ನಿಷೇಧಿತ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಎರಡು ವಾರ ಈ ಪ್ರಕ್ರಿಯೆ ಮುಂದುವರಿಯಲಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧಿತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.