ADVERTISEMENT

ನ್ಯಾಯಾಧೀಶರ ಶಂಕಾಸ್ಪದ ಸಾವು; ಷಡ್ಯಂತ್ರ ಬಯಲಿಗೆಯಲು ತಾಕೀತು

ಪಿಟಿಐ
Published 15 ಜನವರಿ 2022, 4:58 IST
Last Updated 15 ಜನವರಿ 2022, 4:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಂಚಿ: ಧನ್‌ಬಾದ್‌ ನ್ಯಾಯಾಧೀಶರ ಸಾವಿನ ಹಿಂದಿನ ಷಡ್ಯಂತ್ರ ಬಯಲಿಗೆ ಎಳೆಯಬೇಕು ಎಂದು ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಸಿಬಿಐಗೆ ತಾಕೀತು ಮಾಡಿದೆ.

ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಈ ಸಾವಿನ ಹಿಂದೆ ದೊಡ್ಡ ಸಂಚು ಇದೆ ಎಂದು ಅಭಿಪ್ರಾಯಪಟ್ಟಿತು.

ಧನ್‌ಬಾದ್‌ನ ನ್ಯಾಯಾಧೀಶರಾದ ಉತ್ತಮ್ ಆನಂದ್‌ ಅವರು ಕಳೆದ ವರ್ಷ ಜುಲೈ ತಿಂಗಳಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

ADVERTISEMENT

ಆನ್‌ಲೈನ್‌ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಾ.ರವಿರಂಜನ್‌ ನೇತೃತ್ವದ ವಿಭಾಗೀಯ ಪೀಠವು, ‘ಮೊಬೈಲ್‌ ಫೋನ್ ಕಳ್ಳತನ ಅಥವಾ ಇನ್ನಾವುದೇ ಕಾರಣಗಳಿಗಾಗಿ ಈ ಕೊಲೆ ನಡೆದಿಲ್ಲ’ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಪ್ರಕರಣ ಸಂಬಂಧ ಬಂಧಿಸಿರುವ ಇಬ್ಬರು ಆರೋಪಿಗಳಿಗೆ ನಡೆಸಿದ ಮಂಪರು ಪರೀಕ್ಷೆ ವರದಿ ಹಾಜರುಪಡಿಸಬೇಕು ಎಂದೂ ಸೂಚಿಸಿತು. ವಿಚಾರಣೆಯನ್ನು ಜ. 21ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.