ADVERTISEMENT

ಜಾರ್ಖಂಡ್: ನಿಷೇಧಿತ ಸಂಘಟನೆಯ ಇಬ್ಬರು ನಕ್ಸಲರ ಬಂಧನ

ಪಿಟಿಐ
Published 18 ಆಗಸ್ಟ್ 2025, 14:14 IST
Last Updated 18 ಆಗಸ್ಟ್ 2025, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾತೆಹಾರ್ (ಜಾರ್ಖಂಡ್): ನಿಷೇಧಿತ ಸಿಪಿಐ (ಮಾವೋವಾದಿ)ಯಿಂದ‌ ಬೇರ್ಪಟ್ಟ ಜಾರ್ಖಂಡ್‌ ಜನ ಮುಕ್ತಿ ಪರಿಷತ್‌ನ (ಜೆಜೆಎಂಪಿ)‌ ಇಬ್ಬರು ಸದಸ್ಯರನ್ನು ಜಾರ್ಖಂಡ್ ಲಾತೆಹಾರ್ ಜಿಲ್ಲೆಯಲ್ಲಿ ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೀನ್ ಅನ್ಸಾರಿ (30) ಮತ್ತು ಕೃಷ್ಣ ಪ್ರಸಾದ್ (30) ಬಂಧಿತ ಬಂಡುಕೋರರು. ಇಬ್ಬರನ್ನೂ ಅವರ ಮನೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಇಬ್ಬರು ನಕ್ಸಲರು ತಮ್ಮ ಮನೆಗೆ ಬಂದಿದ್ದಾರೆ ಎಂಬ ಮಾಹಿತಿ ಲಾತೆಹಾರ್ ಪೊಲೀಸ್ ವರಿಷ್ಠಾಧಿಕಾರಿ‌ಗೆ ಲಭಿಸಿತ್ತು. ಇದರ ಆಧಾರದಲ್ಲಿ ತಂಡ ರಚಿಸಿ ಇಬ್ಬರು ಬಂಡುಕೋರರನ್ನು ಬಂಧಿಸಲಾಯಿತು’ ಎಂದು ಲಾತೆಹಾರ್ ಸಬ್‌ಡಿವಿಜನ್ ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.