ADVERTISEMENT

ಬಿಜೆಪಿ ವಿರುದ್ಧ ಜಿಗ್ನೇಶ್‌ ವಾಗ್ದಾಳಿ

ಪಿಟಿಐ
Published 29 ಡಿಸೆಂಬರ್ 2018, 20:07 IST
Last Updated 29 ಡಿಸೆಂಬರ್ 2018, 20:07 IST

ಪಾಲ್ಗಡ (ಮಹಾರಾಷ್ಟ್ರ): ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಾಲ್ಗಡ ಜಿಲ್ಲೆಯ ವಾಸಿಯಲ್ಲಿ ‘ಪರ್ಯಾವರ್ಣ ಸಂವರ್ಧನಾ ಸಮಿತಿ‘ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ’ಬುಲೆಟ್‌ ಟ್ರೈನ್‌’ ಯೋಜನೆ ಕೇವಲ ಫೋಟೋ ಶೂಟ್‌ಗೆ ಸೀಮಿತವಾಯಿತು ಎಂದು ಟೀಕಿಸಿದರು. ‌

ಮೋದಿ ಸುಳ್ಳುಗಾರ, ನಟ ಸಾಮ್ರಾಟ. ಅಭಿವೃದ್ಧಿ ವಿಷಯಗಳ ಬಗ್ಗೆ ಸುಳ್ಳು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.