ADVERTISEMENT

ಬಾಲ ನ್ಯಾಯ ಕಾಯ್ದೆ ಪರಿಪೂರ್ಣವಾಗಿಲ್ಲ: ಮಧ್ಯಪ್ರದೇಶ ಹೈಕೋರ್ಟ್‌

ಇಂದೋರ್‌ ಪೀಠ ಅಭಿಮತ

ಪಿಟಿಐ
Published 2 ಜುಲೈ 2021, 14:39 IST
Last Updated 2 ಜುಲೈ 2021, 14:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್‌: ಬಾಲ ನ್ಯಾಯ ಕಾಯ್ದೆಯು (ಜೆಜೆ ಆ್ಯಕ್ಟ್‌) ಪರಿಪೂರ್ಣವಾಗಿಲ್ಲ. ಹೇಯ ಕೃತ್ಯಗಳನ್ನು ಕೈಗೊಳ್ಳಲು ಮುಕ್ತ ಅವಕಾಶ ನೀಡುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠ ಹೇಳಿದೆ.

ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಬಾಲಕನೊಬ್ಬನಿಗೆ ಜಾಮೀನು ನೀಡಲು ನಿರಾಕರಿಸಿರುವ ಪೀಠವು, ಕಾಯ್ದೆಯಲ್ಲಿನ ಲೋಪ ದೋಷಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

‘ಈ ದೇಶದ ಶಾಸನ ರೂಪಿಸುವವರ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಇನ್ನೂ ಎಷ್ಟು ನಿರ್ಭಯಾಗಳು ಬಲಿದಾನ ಮಾಡಬೇಕು’ ಎಂದು ಪೀಠ ಪ್ರಶ್ನಿಸಿದೆ.

ADVERTISEMENT

‘ಈಗಿರುವ ಕಾಯ್ದೆಯು 16 ವರ್ಷದ ಒಳಗಿನವರಿಗೆ ಹೇಯ ದುಷ್ಕೃತ್ಯಗಳನ್ನು ಎಸಗಲು ಮುಕ್ತ ಅವಕಾಶ ನೀಡುತ್ತದೆ. ದೆಹಲಿಯಲ್ಲಿ ನಿರ್ಭಯಾ ಪ್ರಕರಣದಿಂದ ಶಾಸಕಾಂಗ ಯಾವುದೇ ಪಾಠಗಳನ್ನು ಕಲಿತಿಲ್ಲ ಎನ್ನುವುದನ್ನು ತಿಳಿದು ಈ ನ್ಯಾಯಾಲಯಕ್ಕೆ ನೋವಾಗಿದೆ’ ಎಂದು ನ್ಯಾಯಮೂರ್ತಿ ಸುಬೋಧ ಅಭ್ಯಾಂಕರ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.