ನವದೆಹಲಿ: ಬಾಲಕಿಯರು ಒಳಗೊಂಡಂತೆ ಕಿರಿಯ ವಯಸ್ಸಿನ ಕಬಡ್ಡಿ ಆಟಗಾರರು ಪುರುಷರ ಶೌಚಾಲಯದ ಒಳಗೆ ಊಟ ಮಾಡುತ್ತಿರುವ ವಿಡಿಯೊ ಒಂದನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಪುರುಷರ ಶೌಚಾಲಯದ ಒಳಗೆ ಬಾಲಕ, ಬಾಲಕಿಯರು ಊಟ ಮಾಡುತ್ತಿರುವುದು ದೃಶ್ಯದಲ್ಲಿದೆ. ನೆಲದ ಮೇಲೆ ಇಡಲಾದ ಅನ್ನ ಮತ್ತು ಸಾರನ್ನು ವಿದ್ಯಾರ್ಥಿಗಳು ಬಡಿಸಿಕೊಂಡು ಊಟ ಮಾಡುತ್ತಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಸುಳ್ಳು ಪ್ರಚಾರ ಮಾಡಲು ಕೋಟ್ಯಂತರ ರೂಪಾಯಿ ಇದೆ. ಆದರೆ ನಮ್ಮ ಕ್ರೀಡಾಪಟುಗಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲು ಹಣವಿಲ್ಲ. ಇಂತಹ ಸರ್ಕಾರಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ವಿಡಿಯೊದಲ್ಲಿರುವ ಬಾಲಕ ಮತ್ತು ಬಾಲಕಿಯರು ಉತ್ತರ ಪ್ರದೇಶದ ಕಬಡ್ಡಿ ಆಟಗಾರರು ಎಂದು ಕಾಂಗ್ರೆಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.