ADVERTISEMENT

ಬಾಲಿವುಡ್ ನಟಿ ಕಂಗನಾ ರನೌತ್ ತಾಯಿ ಪಕ್ಷಕ್ಕೆ ಸೇರುವುದಾದರೆ ಸ್ವಾಗತ: ಬಿಜೆಪಿ

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 10:45 IST
Last Updated 11 ಸೆಪ್ಟೆಂಬರ್ 2020, 10:45 IST
ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಅವರ ತಾಯಿ ಆಶಾ ರನೌತ್ (ಟ್ವಿಟರ್ ಚಿತ್ರ)
ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಅವರ ತಾಯಿ ಆಶಾ ರನೌತ್ (ಟ್ವಿಟರ್ ಚಿತ್ರ)   

ನವದೆಹಲಿ: ಬಾಲಿವುಡ್‌ ನಟಿ ಕಂಗನಾ ರನೌತ್ ಅವರಿಗೆ ವೈ–ಪ್ಲಸ್‌ ಶ್ರೇಣಿಯ ಭದ್ರತೆ ನೀಡಿರುವುದಕ್ಕೆ ಸಂಬಂಧಿಸಿಂದಂತೆ ಅವರ ತಾಯಿ ಆಶಾ ರನೌತ್ ಅವರು ಬಿಜೆಪಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಇದೀಗ ಆಶಾ ಅವರು ಪಕ್ಷಕ್ಕೆ ಸೇರಲು ನಿರ್ಧರಿಸಿದರೆ ಸ್ವಾಗತಿಸುವುದಾಗಿಬಿಜೆಪಿ ಹೇಳಿದೆ.

ಆಶಾ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಆದರೆ, ಬಿಜೆಪಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ ಎಂದು ಹಿಮಾಚಲ ಪ್ರದೇಶ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುರೇಶ್‌ ಕುಮಾರ್ ಕಶ್ಯಪ್‌ ತಿಳಿಸಿದ್ದಾರೆ.

‘ಮಾಧ್ಯಮಗಳಲ್ಲಿ ವರದಿಯಾದಅವರ (ಆಶಾ) ಹೇಳಿಕೆಯನ್ನು ನಾನೂ ಕೇಳಿದ್ದೇನೆ. ತಮ್ಮ ಮಗಳಿಗೆ ಭದ್ರತೆ ಒದಗಿಸಿದ್ದರ ಬಗ್ಗೆ ಅವರು ಬಿಜೆಪಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದುದ್ದಾಗಿ ಮತ್ತು ಇದೀಗ ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ’ ಎಂದು ಕಶ್ಯಪ್ ಹೇಳಿದ್ದಾರೆ.

ADVERTISEMENT

‘ಬಿಜೆಪಿ ಸೇರ್ಪಡೆ ವಿಚಾರವಾಗಿ ಹೇಳುವುದಾದರೆ, ಅವರು ಇನ್ನೂ ಅಧಿಕೃತವಾಗಿ ಪಕ್ಷಕ್ಕೆ ಸೇರಿಕೊಂಡಿಲ್ಲ ಮತ್ತು ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.ನಾನೂ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿಲ್ಲ. ಆದರೆ, ಅವರು ಪಕ್ಷಕ್ಕೆ ಸೇರಲು ನಿರ್ಧರಿಸಿದರೆ, ಸ್ವಾಗತಿಸಲಿದ್ದೇವೆ’ ಎಂದಿದ್ದಾರೆ.

ಮುಂಬೈನಲ್ಲಿರುವ ಕಂಗನಾ ರನೌತ್ ಅವರ ಕಟ್ಟಡವನ್ನುಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನೋಟಿಸ್ ನೀಡಿದ್ದ‌ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ), ಬಳಿಕನೆಲಸಮಗೊಳಿಸಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಶ್ಯಪ್‌,‘ಕಂಗನಾ ಅವರೊಂದಿಗೆ ಮಹಾರಾಷ್ಟ್ರ ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಸರ್ಕಾರ ನಡೆಸುತ್ತಿರುವ ದ್ವೇಷ ರಾಜಕಾರಣವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಂಗನಾ ಭಾರತ ಮತ್ತು ಹಿಮಾಚಲ ಪ್ರದೇಶದ ಧೈರ್ಯಶಾಲಿ ಹೆಣ್ಣುಮಗಳು. ಇಡೀ ದೇಶವೇ ಅವರೊಂದಿಗೆ ನಿಂತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.