ADVERTISEMENT

ರೈತರ ಹೋರಾಟವನ್ನು ಹತ್ತಿಕ್ಕಲು ಸಂಚು ಹೂಡಲಾಗಿದೆ: ಕಪಿಲ್ ಸಿಬಲ್

ಏಜೆನ್ಸೀಸ್
Published 30 ಜನವರಿ 2021, 16:05 IST
Last Updated 30 ಜನವರಿ 2021, 16:05 IST
ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್
ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್   

ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಚಳವಳಿಯನ್ನು ಹತ್ತಿಕ್ಕಲು ಸಂಚು ಹೂಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಶನಿವಾರ ಆರೋಪಿಸಿದ್ದಾರೆ.

ಗಣರಾಜ್ಯೋತ್ಸವ ದಿನದಂದು ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಈ ಕುರಿತು ಪ್ರಶ್ನೆ ಮಾಡಿರುವ ಕಪಿಲ್ ಸಿಬಲ್, ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ಗರಿಷ್ಠ ಭದ್ರತೆ ಒದಗಿಸಲಾಗುತ್ತದೆ. ಹಾಗಿರುವಾಗ ಪ್ರತಿಭಟನಾಕಾರರು ಅಲ್ಲಿಗೆ ಹೇಗೆ ಪ್ರವೇಶಿಸಿದರು ಎಂದು ಪ್ರಶ್ನಿಸಿದರು.

ನಾನು ಹಲವು ಬಾರಿ ಕೆಂಪುಕೋಟೆಗೆ ಹೋಗಿದ್ದೇನೆ. ಸರಿಯಾದ ಅನುಮತಿಯಿಲ್ಲದೆ ಯಾರಿಗೂ ಕೆಂಪು ಕೋಟೆಯೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಗಣರಾಜ್ಯೋತ್ಸವ ದಿನದಂದು ಗರಿಷ್ಠ ಭದ್ರತೆ ಒದಗಿಸಲಾಗುತ್ತದೆ. ಆದರೆ ಈ ಜನರು ನೇರವಾಗಿ ಕೋಟೆಯನ್ನು ತಲುಪಿದರು. ನಮ್ಮನ್ನು ಯಾರು ತಡೆಯಲಿಲ್ಲಎಂದು ಅವರೇ ಹೇಳುತ್ತಿದ್ದಾರೆ. ಹಾಗಿದ್ದರೆ ಅವರನ್ನು ತಡೆಯಲಿಲ್ಲವೇ? ಅವರು ಹೇಗೆ ಮತ್ತು ಏಕೆ ಕೆಂಪು ಕೋಟೆಯನ್ನು ತಲುಪಿದರು ಎಂದು ಪ್ರಶ್ನಿಸಿದರು.

ADVERTISEMENT

ರೈತ ಹೋರಾಟಗಾರರನ್ನು ಖಾಲಿಸ್ತಾನಿಗಳೆಂದು ಬಿಂಬಿಸಲಾಗುತ್ತಿದೆ ಎಂಬುದನ್ನು ಸಿಬಲ್ ಟೀಕಿಸಿದರು. ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೆಲ್ಲರು ಖಾಲಿಸ್ತಾನಿಗಳೇ? ರೈತ ಮುಖಂಡ ರಾಕೇಶ್ ಟಿಕಾಯತ್ ಖಾಲಿಸ್ತಾನಿಯೇ? ರೈತರ ಹೋರಾಟವು ಪ್ರಜೆಗಳಆಂದೋಲನ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.