ADVERTISEMENT

ಕುಟುಂಬ ನಿರ್ವಹಣೆಗಾಗಿ ಜ್ಯೂಸ್ ಮಾರುತ್ತಿದ್ದಾರೆ ಕಾರ್ಗಿಲ್ ಹೀರೊ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 3:03 IST
Last Updated 9 ಜುಲೈ 2019, 3:03 IST
ಸತ್ಬೀರ್ ಸಿಂಗ್
ಸತ್ಬೀರ್ ಸಿಂಗ್   

ದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಹಲವಾರು ಯೋಜನೆಗಳನ್ನು ಅಂದಿನ ಸರ್ಕಾರ ಘೋಷಿಸಿತ್ತು.ಆದರೆ ಇಲ್ಲೊಬ್ಬ ಯೋಧ ತಮ್ಮ ಕುಟುಂಬ ನಿರ್ವಹಣೆಗಾಗಿ ದೆಹಲಿಯ ಹಳ್ಳಿಯೊಂದರಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದಾರೆ.

ಎರಡನೇ ರಾಜ್‍ಪುತನ ರೈಫಲ್ಸ್ ನ ಯೋಧ ಸತ್ಬೀರ್ ಸಿಂಗ್ ಮೌಂಟ್ ಟೊಲೊಲಿಂಗ್ ಮರುವಶ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಯುದ್ದ ವೇಳೆ ಗುಂಡು ತಾಗಿ ಅಂಗವಿಕಲಾಗಿದ್ದಾರೆ. ನಾನು ನನ್ನ ತಂಡದ ಮಾರ್ಗದರ್ಶಿಯಾಗಿ ಮುಂದೆ ಸಾಗುತ್ತಿದೆ. ಆ ವೇಳೆ ನಾನು ಮೂವರು ನುಸುಳುಕೋರರನ್ನು ಕಂಡೆ.ತಕ್ಷಣವೇ ನಾನು ನನ್ನ ಬೆಟಾಲಿಯನ್‍ಗೆ ತಿಳಿಸಿ ಅವರನ್ನು ಸುತ್ತುವರಿದೆವು.ನುಸುಳುಕೋರರಿಂದ ನಾವು ಸುಮಾರು 15 ಮೀಟರ್ ದೂರದಲ್ಲಿದ್ದೆವು.

ನಾನು ಕೈಯಲ್ಲಿದ್ದ ಗ್ರೆನೇಡ್‍ನ್ನು ಅವರತ್ತ ಬಿಸಾಡಿ, 30 ಗುಂಡುಗಳನ್ನು ಹಾರಿಸಿದೆ.ನಾನು ಮ್ಯಾಗಜಿನ್ ಲೋಡ್ ಮಾಡುತ್ತಿರುವ ಹೊತ್ತಲ್ಲಿ ಗ್ರೆನೇಡ್ ಸ್ಫೋಟಗೊಂಡಿತು.ಇಬ್ಬರು ನುಸುಳುಕೋರರು ಅಲ್ಲಿಯೇ ಹತರಾದರು ಎಂದುInUth.com ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.

ADVERTISEMENT

ನನಗೆ ಪೆಟ್ರೋಲ್ ಪಂಪ್ ಮತ್ತು ಜಮೀನು ನೀಡುವುದಾಗಿ ಭರವಸೆ ನೀಡಲಾಗಿತ್ತು. ನನಗೆ ತುಂಡು ಜಮೀನು ಸಿಕ್ಕಿತ್ತು. ನಾನು ಎಲ್ಲ ದುಡ್ಡನ್ನು ಆ ಜಮೀನಿಗಾಗಿ ಖರ್ಚು ಮಾಡಿದ್ದೆ. ಆಮೇಲೆ ಆ ಜಮೀನನ್ನು ವಾಪಸ್ ಪಡೆದುಕೊಳ್ಳಲಾಯಿತು.

ನನಗೆ ಪೆಟ್ರೋಲ್ ಪಂಪ್ ಸಿಗುವುದರಲ್ಲಿತ್ತು ಆದರೆ ಅಷ್ಟೊತ್ತಿಗೆ ರಾಜಕೀಯ ಜಟಾಪಟಿಯಿಂದಾಗಿ ಅದೂ ಸಿಗಲಿಲ್ಲ. ನನಗೆ ತಿಂಗಳಿಗೆ ₹18,000 ಪಿಂಚಣಿ ಸಿಗುತ್ತದೆ.ನಾಲ್ವರು ಸದಸ್ಯರಿರುವ ಕುಟುಂಬವನ್ನು ನಿರ್ವಹಿಸಲು ಇದು ಸಾಲುವುದಿಲ್ಲ. ಹಾಗಾಗಿ ನಾನು ಜ್ಯೂಸ್ ಅಂಗಡಿ ನಡೆಸುತ್ತಿದ್ದೇನೆ ಎಂದಿದ್ದಾರೆ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.