ADVERTISEMENT

ಪುಣೆ: ಬೊಮ್ಮಾಯಿ ಹೇಳಿಕೆ ಖಂಡಿಸಿ ಕರ್ನಾಟಕ ಬಸ್‌ಗಳ ಮೇಲೆ ಬರಹ

ಪಿಟಿಐ
Published 25 ನವೆಂಬರ್ 2022, 2:26 IST
Last Updated 25 ನವೆಂಬರ್ 2022, 2:26 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಪುಣೆ : ಗಡಿ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಮರಾಠ ಮಹಾಸಂಘದ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮೇಲೆ ‘ಜೈ ಮಹಾರಾಷ್ಟ್ರ’, ‘ಖಂಡನೆ’ ಎಂಬುದಾಗಿ ಬರೆದು ಗುರುವಾರ ಪ್ರತಿಭಟನೆ ವ್ಯಕ್ತಪಡಿಸಿದರು.

ಪುಣೆ ಜಿಲ್ಲೆಯ ದೌಂಡ್‌ನ ಬಸ್‌ ನಿಲ್ದಾಣದಲ್ಲಿ ನಿಪ್ಪಾಣಿ–ಔರಂಗಾಬಾದ್‌ ಬಸ್‌ ಮೇಲೆ ಕೇಸರಿ ಹಾಗೂ ಕಪ್ಪು ಬಣ್ಣಗಳಿಂದ ಈ ಖಂಡನಾ ವಾಕ್ಯಗಳನ್ನು ಬರೆದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧವೂ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

‘ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಈ ಗ್ರಾಮಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕು ಎಂದು ಸಾಂಗ್ಲಿ ಜಿಲ್ಲೆ ಜತ್‌ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳು ಇತ್ತೀಚೆಗೆ ನಿರ್ಣಯ ಅಂಗೀಕರಿಸಿದ್ದವು’ ಎಂಬುದಾಗಿ ಬೊಮ್ಮಾಯಿ ಅವರು ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.