ADVERTISEMENT

ಕರೂರು ಕಾಲ್ತುಳಿತ: ಟಿವಿಕೆಯ ಎಲ್ಲ ಸಾರ್ವಜನಿಕ ಸಭೆಗಳು ಮುಂದೂಡಿಕೆ

ಪಿಟಿಐ
Published 1 ಅಕ್ಟೋಬರ್ 2025, 10:41 IST
Last Updated 1 ಅಕ್ಟೋಬರ್ 2025, 10:41 IST
<div class="paragraphs"><p>ಕರೂರು ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಬಿದ್ದಿರುವ ಚಪ್ಪಲಿಗಳ ರಾಶಿ&nbsp; &nbsp; </p></div>

ಕರೂರು ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಬಿದ್ದಿರುವ ಚಪ್ಪಲಿಗಳ ರಾಶಿ   

   

–ಎಎಫ್‌ಪಿ ಚಿತ್ರ

ಚೆನ್ನೈ; ಕರೂರು ಕಾಲ್ತುಳಿತ ಪ್ರಕರಣದ ಬಳಿಕ ತಮಿಳುನಾಡಿನಾದ್ಯಂತ ಯೋಜಿಸಿದ್ದ ಸಾರ್ವಜನಿಕ ಸಭೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ನಟ, ರಾಜಕಾರಣಿ ವಿಜಯ್ ಅವರ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವು(ಟಿವಿಕೆ) ತಿಳಿಸಿದೆ.

ADVERTISEMENT

ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಸಾರ್ವಜನಿಕ ಸಭೆ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ಟಿವಿಕೆ ಪಕ್ಷ ತಲಾ ₹20 ಲಕ್ಷ ಪರಿಹಾರ ಘೋಷಿಸಿತ್ತು.

ಸದ್ಯ, ಸಂತ್ರಸ್ತರ ಕುಟುಂಬಗಳ ಭೇಟಿಗೆ ತೆರಳಿರುವ ವಿಜಯ್ ತಿರುಚಿರಾಪಳ್ಳಿ, ನಾಮಕ್ಕಲ್ ಮತ್ತು ಕರೂರಿಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ಮುಂದಿನ ಎರಡು ವಾರ ಯೋಜಿಸಲಾಗಿದ್ದ ಸಾರ್ವಜನಿಕ ಸಭೆಗಳನ್ನು ಮುಂದೂಡಲಾಗಿದೆ.

ನಮ್ಮ 41 ಸಹೋದರರನ್ನು ಕಳೆದುಕೊಂಡಿದ್ದಕ್ಕೆ ನಾವು ದುಃಖ ಮತ್ತು ವಿಷಾದದಲ್ಲಿದ್ದೇವೆ.ಈ ಪರಿಸ್ಥಿತಿಯಲ್ಲಿ, ನಮ್ಮ ನಾಯಕ ವಿಜಯ್ ಅವರ ಮುಂದಿನ ಎರಡು ವಾರಗಳ ಜನರ ಭೇಟಿ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ. ಇವುಗಳ ಪರಿಷ್ಕೃತ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಟಿವಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.