ADVERTISEMENT

ಕಾಸರಗೋಡು ಸ್ಥಳೀಯ ಸಂಸ್ಥೆ ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 9:15 IST
Last Updated 16 ಡಿಸೆಂಬರ್ 2020, 9:15 IST

ಮಂಗಳೂರು: ಕಾಸರಗೋಡು ಜಿಲ್ಲಾ ಪಂಚಾಯಿತಿಯ 17 ವಾರ್ಡ್‌‌ಗಳ ಪೈಕಿ ಯುಡಿಎಫ್‌ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಐದು ಕಡೆಗಳಲ್ಲಿ ಎಲ್‌ಡಿಎಫ್‌ ಮುನ್ನಡೆಯಲ್ಲಿದೆ. ಎನ್‌ಡಿಎ ಒಂದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ವರ್ಕಾಡಿ, ದೇಲಂಪಾಡಿ, ಚಿತ್ತಾರಿಕ್ಕಾಲ್, ಪಿಲಿಕ್ಕೋಡ್, ಪೆರಿಯ, ಉದುಮ, ಸಿವಿಲ್ ಸ್ಟೇಷನ್, ಕುಂಬಳೆಯಲ್ಲಿ ಯುಡಿಎಫ್‌ ಮುನ್ನಡೆಯಲ್ಲಿದೆ.

ಪುತ್ತಿಗೆ, ಬೇಡಡ್ಕ, ಕಳ್ಳಾರ್, ಕರಿಂದಲ, ಚೆರ್ವತ್ತೂರಿನಲ್ಲಿ ಎಲ್‌ಡಿಎಫ್‌ ಮುನ್ನಡೆಯಲ್ಲಿದ್ದು, ಎಡನೀರು ಕ್ಷೇತ್ರದಲ್ಲಿ ಎನ್‌ಡಿಎ ಮತ್ತು ಎಲ್‌ಡಿಎಫ್‌ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಚೆಂಗಳದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್‌ 13, ಎನ್‌ಡಿಎ 8 ಮೇಲುಗೈ ಸಾಧಿಸಿದ್ದು, ಎಲ್‌ಡಿಎಫ್‌ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ.

ADVERTISEMENT

ಕಾಞಂಗಾಡ್‌ ನಗರಸಭೆಯಲ್ಲಿ ಎಲ್‌ಡಿಎಫ್‌ 12, ಯುಡಿಎಫ್‌ 5, ಎನ್ ಡಿಎ 2 ಮತ್ತು ನೀಲೇಶ್ವರ ನಗರಸಭೆಯಲ್ಲಿ ಯುಡಿಎಫ್‌ 2, ಎಲ್‌ಡಿಎಫ್‌ 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.