ಜಮ್ಮು: ಕಾಶ್ಮೀರದಿಂದ ಸೇಬು ಸಾಗಣೆಗೆ 21 ಕಂಟೈನರ್ ವ್ಯಾಗನ್‌ಗಳುಳ್ಳ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಸೋಮವಾರ ಆರಂಭಿಸಿದೆ.
ಸೇಬು ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯ ಅನಂತನಾಗ್ ಗೂಡ್ಸ್ ಶೆಡ್ ಟರ್ಮಿನಲ್‌ನಿಂದ ವ್ಯಾಗನ್‌ಗಳನ್ನು ಬಳಸಿಕೊಂಡು ಕಳೆದ ವಾರ 6,400 ಟನ್‌ಗಳಿಗೂ ಹೆಚ್ಚು ಸೇಬುಗಳನ್ನು ಕಾಶ್ಮೀರದಿಂದ ದೆಹಲಿಗೆ ಸಾಗಣೆ ಮಾಡಲಾಗಿದೆ.
ಸಾಗಣೆಗಾಗಿ ಬಡೀ ಬ್ರಾಹ್ಮಣಾದಲ್ಲಿ ಒಟ್ಟು 21 ವ್ಯಾಗನ್‌ಗಳ ಸರಬರಾಜು ಮಾಡಲಾಗಿದೆ. ಪ್ರತಿ ವ್ಯಾಗನ್‌ನಲ್ಲಿ ಸುಮಾರು 76 ವಿಶೇಷ ಕಂಟೈನರ್‌ಗಳನ್ನು ಅಳವಡಿಸಲಾಗಿದ್ದು, ಒಂದು ಕಂಟೈನರ್‌ಗೆ 40 ಕೆ.ಜಿ ಹಣ್ಣು ಹಿಡಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.