ADVERTISEMENT

ಎಲ್ಲಾ ಚೆನ್ನಾಗಿತ್ತು, ಎರಡೂವರೆ ವರ್ಷದಿಂದ ಸಮಸ್ಯೆ ಆರಂಭವಾಗಿದೆ: ಕಾಶ್ಮೀರಿ ಪಂಡಿತ

ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ ಅಂಕಜ್ ಟಿಕ್ಕೋ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 4:22 IST
Last Updated 4 ಜೂನ್ 2022, 4:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ‘ಕಾಶ್ಮೀರದಲ್ಲಿ ನಮಗೆ ಯಾವುದೇ ತೊಂದರೆ ಇರಲಿಲ್ಲ. 10 ವರ್ಷಗಳಿಂದ ಇಲ್ಲೇ ನೆಲೆಸಿದ್ದೇನೆ. ಸ್ಥಳೀಯರು ನಮಗೆ ಎಲ್ಲಾ ರೀತಿಯ ಸಹಕಾರ, ಸಹಾಯ ನೀಡುತ್ತಿದ್ದರು.ಈ ಹಿಂದೆ ಇರದಿದ್ದ ಸಮಸ್ಯೆ ಎರಡೂವರೆ ವರ್ಷಗಳಿಂದ ಆರಂಭವಾಗಿದೆ’ ಎಂದು ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ ಅಂಕಜ್ ಟಿಕ್ಕೋ ಆರೋಪಿಸಿದ್ದಾರೆ.

‘1990ರಲ್ಲಿ ನಮ್ಮ ಪೋಷಕರ ಜತೆ ಏನು ನಡೆಯಿತೋ ಅದು, ಈಗ ನಮ್ಮೊಂದಿಗೆ ನಡೆಯುತ್ತಿದೆ’ ಎಂದು ಅಂಕಜ್ ಕಳವಳ ವ್ಯಕ್ತಪಡಿಸಿದ್ದಾರೆ.

1990ರಲ್ಲಿ ಇದ್ದ ಸ್ಥಿತಿಗಿಂತ ಕೆಟ್ಟ ಸ್ಥಿತಿಗೆ ಕಾಶ್ಮೀರ ದೂಡಲ್ಪಟ್ಟಿದೆ. ಕಾಶ್ಮೀರವನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಎಎಪಿ ನಾಯಕಸಂಜಯ್ ಸಿಂಗ್ ಹೇಳಿದ್ದಾರೆ.

ADVERTISEMENT

ಕಾಶ್ಮೀರದಲ್ಲಿ ಹಿಂದೂಗಳಿಗೆ ಮತ್ತು ವಲಸೆ ಕಾರ್ಮಿಕರಿಗೆ ನೀಡುತ್ತಿರುವ ಭದ್ರತೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ಹೆಚ್ಚಿಸಬೇಕು ಎಂದು ಶಿವಸೇನಾ ಸಂಸದೆಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.