ADVERTISEMENT

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಸರಪಂಚನ ಕೊಲೆ: ಭಾರಿ ಖಂಡನೆ 

ಏಜೆನ್ಸೀಸ್
Published 9 ಜೂನ್ 2020, 3:31 IST
Last Updated 9 ಜೂನ್ 2020, 3:31 IST
ಅಜಯ್ ಪಂಡಿತಾ(ಭಾರ್ತಿ)     ಚಿತ್ರ: ಟ್ವಿಟರ್‌ ಖಾತೆಯಿಂದ
ಅಜಯ್ ಪಂಡಿತಾ(ಭಾರ್ತಿ) ಚಿತ್ರ: ಟ್ವಿಟರ್‌ ಖಾತೆಯಿಂದ    

ಅನಂತನಾಗ: ದಕ್ಷಿಣ ಕಾಶ್ಮೀರದ ಅನಂತ್‌ನಾಗದ40 ವರ್ಷದ ಕಾಶ್ಮೀರಿ ಪಂಡಿತ, ಸರಪಂಚ್‌ ಅಜಯ್ ಪಂಡಿತ್‌(ಭಾರ್ತಿ) ಎಂಬುವವರನ್ನು ಸೋಮವಾರ ಸಂಜೆ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅಜಯ್‌ ಪಂಡಿತ್‌ ಅವರು ಲಾರ್ಕಿಪೊರಾದ ಲೊಕ್ಬಾವನ್‌ ಗ್ರಾಮದ ಪಂಚಾಯಿತಿ ಸದಸ್ಯರಾಗಿದ್ದರು. ಅವರನ್ನು ಸೋಮವಾರ ಸಂಜೆ ಭಯೋತ್ಪಾದಕರು ಹಲ್ಲೆ ಮಾಡಿ, ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಅಜಯ್‌ ಪಂಡಿತ್‌ ಅವರ ಕೊಲೆಗೆ ಜಮ್ಮು ಕಾಶ್ಮೀರದ ಎಲ್ಲ ಪಕ್ಷಗಳೂ ಖಂಡನೆ ವ್ಯಕ್ತಪಡಿಸಿವೆ.

ADVERTISEMENT

ಪಕ್ಷದ ಮುಖಂಡನ ಸಾವಿಗೆ ರಾಹುಲ್‌ ಗಾಂಧಿ ಸಂತಾಪ ಸೂಚಿಸಿದ್ದಾರೆ. ‘ಕಾಶ್ಮೀರದಲ್ಲಿ ಪ್ರಜಾಸತ್ತೆಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಅಜಯ್ ಪಂಡಿತ್‌ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ದುಃಖದ ಈ ಸಮಯದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಹಿಂಸೆ ಎಂದಿಗೂ ಗೆಲ್ಲುವುದಿಲ್ಲ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ ಮೋದಿ ಪ್ರಧಾನಿಯಾದ ನಂತರ ರಾಜ್ಯದಲ್ಲಿ ಸ್ಥಾಪಿಸಿದ ತಳಮಟ್ಟದ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಹತ್ತಿಕ್ಕಲು ರಾಷ್ಟ್ರ ವಿರೋಧಿ ಶಕ್ತಿಗಳು ನಡೆಸಿದ ಹತಾಶ ಪ್ರಯತ್ನವಿದು,’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರಲ್ಲಿ ಆತಂಕ

ಅನಂತ್‌ನಾಗ್ ಜಿಲ್ಲೆಯಲ್ಲಿ ಸೋಮವಾರ ಭಯೋತ್ಪಾದಕರಿಂದ ನಡೆದ ಅಜಯ್ ಪಂಡಿತ್‌ ಅವರ ಹತ್ಯೆಗೆ ಹಲವು ಕಾಶ್ಮೀರಿ ಪಂಡಿತರ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿವೆ. ಇದು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಲ್ಲಿ "ಭಯ ಬಿತ್ತುವ" ಪ್ರಯತ್ನವೆಂದು ಅವು ಹೇಳಿವೆ. ‌

ಇದೆಲ್ಲದರ ನಡುವೆ, ಮಂಗಳವಾರಗಡಿಯಲ್ಲಿ ಪಾಕ್ ಸೇನೆಯಿಂದ ಭಾರತದೆಡೆಗೆಅಪ್ರಚೋದಿತ ಗುಂಡಿನ ದಾಳಿ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.