ADVERTISEMENT

ಏ.22ರಂದು ಕೇದಾರನಾಥ ದೇಗುಲದ ಬಾಗಿಲು ಓಪನ್: ಚಾರ್‌ಧಾಮ್‌ ಯಾತ್ರೆ ಆರಂಭ

ಪಿಟಿಐ
Published 16 ಫೆಬ್ರುವರಿ 2026, 5:10 IST
Last Updated 16 ಫೆಬ್ರುವರಿ 2026, 5:10 IST
<div class="paragraphs"><p>ಕೇದಾರನಾಥ ದೇಗುಲ</p></div>

ಕೇದಾರನಾಥ ದೇಗುಲ

   

ಪಿಟಿಐ ಚಿತ್ರ

ರುದ್ರಪ್ರಯಾಗ್: ಚಳಿಗಾಲದ ಕಾರಣದಿಂದ ಆರು ತಿಂಗಳುಗಳ ಕಾಲ ಬಾಗಿಲು ಮುಚ್ಚಿರುವ ಕೇದಾರನಾಥ ದೇಗುಲದ ಬಾಗಿಲನ್ನು ಏಪ್ರಿಲ್‌ 22ರಂದು ತೆರೆಯಲಾಗುತ್ತದೆ ಎಂದು ದೇವಾಲಯದ ಸಮಿತಿ ಭಾನುವಾರ ತಿಳಿಸಿದೆ.

ADVERTISEMENT

12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು ಏಪ್ರಿಲ್‌ 22ರಂದು ಬೆಳಿಗ್ಗೆ 8 ಗಂಟೆಗೆ ತೆರೆಯಲಿದೆ. ಈ ಮೂಲಕ ಚಾರ್‌ಧಾಮ್‌ ಯಾತ್ರೆ ಆರಂಭವಾಗಲಿದೆ. 

ಚಾರ್‌ದಾಮ್‌ ಕ್ಷೇತ್ರಗಳಾದ ಕೇದಾರನಾಥ ಏ.22ರಂದು ಬಾಗಿಲು ತೆರೆದರೆ, ಬದರಿನಾಥ ದೇಗುಲ ಏ.23ರಂದು ಬಾಗಿಲು ತೆರೆಯಲಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳು ಏ.19ರಂದು ಅಕ್ಷಯ ತೃತೀಯದಂದು ಬಾಗಿಲು ತೆರೆಯಲಿವೆ.

ಚಳಿಗಾಲದಲ್ಲಿ ದೇಗುಲ ಹಿಮದಿಂದ ಆವೃತವಾಗುವ ಕಾರಣ ನವೆಂಬರ್‌ನಲ್ಲಿ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ದೇಗುಲದ ಬಾಗಿಲುಗಳನ್ನು ಮುಚ್ಚುವ ಮುನ್ನ ಅಲ್ಲಿರುವ ಶಿವನ ವಿಗ್ರಹವನ್ನು ಪಲ್ಲಕ್ಕಿ ಮೂಲಕ ಹೊರತರಲಾಗುತ್ತದೆ. ಚಳಿಗಾಲ ಮುಗಿಯುವವರೆಗೆ ರುದ್ರಪ್ರಯಾಗದಲ್ಲಿನ ಉಖಿಮಠದ ಓಂಕಾರೇಶ್ವರ ದೇಗುಲದಲ್ಲಿ ವಿಗ್ರಹವನ್ನಿಟ್ಟು ಪೂಜಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.