ನವದೆಹಲಿ: ದೆಹಲಿ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಕುಸ್ತಿಪಟುಗಳು ಮತ್ತು ಬಾಡಿ ಬಿಲ್ಡರ್‌ಗಳು ಸೇರಿದಂತೆ ಹಲವು ಮಂದಿ ಕ್ರೀಡಾಪಟುಗಳನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಪ್ರಮುಖವಾಗಿ ಬಾಡಿ ಬಿಲ್ಡರ್‌ಗಳಾದ ತಿಲಕ್ ರಾಜ್, ರೋಹಿತ್ ದಲಾಲ್, ಅಕ್ಷಯ್ ದಿಲಾವರಿ ಸೇರಿದಂತೆ 70–80 ಮಂದಿಯನ್ನು ಪಕ್ಷದ ಶಾಲು, ಟೋಪಿ ನೀಡಿ ಪಕ್ಷಕ್ಕೆ ಸ್ವಾಗತಿದರು.
ಬಾಡಿ ಬಿಲ್ಡರ್‌ಗಳು ಮತ್ತು ಕುಸ್ತಿಪಟುಗಳ ಸೇರ್ಪಡೆಯು ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನಿಕಟವಾಗಿ ಚರ್ಚಿಸಿ ಯೋಜನೆ ರೂಪಿಸಲು ಸಹಾಯಕವಾಗುತ್ತದೆ. ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ಎಎಪಿ, ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತದೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಜಿಮ್ನಾಸಿಯಂ ಮಾಲೀಕರು ಮತ್ತು ಕ್ರೀಡಾಪಟುಗಳು ಪಕ್ಷ ಸೇರಲಿದ್ದಾರೆ ಎಂದರು.
ಈಗ ಪಕ್ಷ ಸೇರಿರುವ ಬಾಡಿ ಬಿಲ್ಡರ್‌ಗಳು ದೆಹಲಿಯ ಜಿಮ್‌ಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷಕ್ಕೆ ಕೊಡುಗೆ ನೀಡಲು ಬಯಸಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ರಾಮ ನಿವಾಸ್ ಗೋಯಲ್ ಹೇಳಿದ್ದಾರೆ.
ಉಚಿತ ಯೋಗ ತರಗತಿ, ಕ್ರೀಡೆ ಬೆಳವಣಿಗೆಗೆ ಎಎಪಿ ಸರ್ಕಾರದ ಪ್ರೋತ್ಸಾಹವನ್ನು ದಲಾಲ್ ಸ್ಮರಿಸಿದರು. ಆ ಕೆಲಸಗಳೇ ಪಕ್ಷ ಸೇರ್ಪಡೆಗೆ ಸ್ಪೂರ್ತಿ ಎಂದರು.
ಕ್ರೀಡಾಪುಟಗಳು ರಾಜಕೀಯದಲ್ಲಿ ಬೆಳವಣಿಗೆ ಕಾಣಲಿದ್ದಾರೆ ಎಂದು ತಿಲಕ್ ರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.