ADVERTISEMENT

ಪಕ್ಷ ಅಧಿಕಾರಕ್ಕೆ ಬಂದರೆ ಉತ್ತರಾಖಂಡದಲ್ಲೂ ಉಚಿತ ವಿದ್ಯುತ್: ಕೇಜ್ರಿವಾಲ್

ಪಿಟಿಐ
Published 11 ಜುಲೈ 2021, 12:34 IST
Last Updated 11 ಜುಲೈ 2021, 12:34 IST
ಅರವಿಂದ್‌ ಕೇಜ್ರಿವಾಲ್
ಅರವಿಂದ್‌ ಕೇಜ್ರಿವಾಲ್   

ಡೆಹ್ರಾಡೂನ್ : ‘ಉತ್ತರಾಖಂಡದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 300 ಯೂನಿಟ್ ವಿದ್ಯುತ್‌, ಬಾಕಿ ವಿದ್ಯುತ್‌ ಬಿಲ್‌ ಮನ್ನಾ ಮತ್ತು ಕೃಷಿಕರಿಗೆ ಉಚಿತ ವಿದ್ಯುತ್‌ ಪೂರೈಸಲಾಗುವುದು‘ ಎಂದು ಆಮ್‌ ಅದ್ಮಿ ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಭರವಸೆ ನೀಡಿದ್ದಾರೆ.

ಉತ್ತರಾಖಂಡ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ‘ಉತ್ತರಾಖಂಡ ವಿದ್ಯುತ್‌ ಉತ್ಪಾದಿಸುವುದಷ್ಟೇ ಅಲ್ಲ, ಅನ್ಯ ರಾಜ್ಯಗಳಿಗೂ ಪೂರೈಸಲಿದೆ. ಈ ಕೊಡುಗೆಗಳನ್ನು ದೆಹಲಿಯಲ್ಲಿ ಜಾರಿಗೆ ತರಲು ನಮಗೆ ಆಗುವುದಾದರೆ, ಉತ್ತರಾಖಂಡದಲ್ಲಿ ಏಕಾಗದು’ ಎಂದು ಕೇಜ್ರಿವಾಲ್‌ ಅವರು ಪ್ರಶ್ನಿಸಿದರು.

‘ವಿದ್ಯುತ್‌ ಕಡಿತ ಇರುವುದಿಲ್ಲ. ದೀರ್ಘಾವಧಿ ವಿದ್ಯುತ್ ವ್ಯತ್ಯಯ ಇರುವುದಿಲ್ಲ. ನಾವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ 7–8 ಗಂಟೆ ವ್ಯತ್ಯಯ ಸಾಮಾನ್ಯವಾಗಿತ್ತು. ಅದನ್ನು ಸರಿಪಡಿಸಿದ್ದೇವೆ’ ಎಂದು ಹೇಳಿದರು.

ADVERTISEMENT

ಕಳೆದ ವರ್ಷ ದೆಹಲಿಯಲ್ಲಿ 200 ಯೂನಿಟ್‌ವರೆಗೂ ವಿದ್ಯುತ್‌ ಬಳಸುವ ಗೃಹ ಸಂಪರ್ಕಗಳಿಗೆ ಶೇ 100ರಷ್ಟು, 201 ರಿಂದ 400 ಯೂನಿಟ್‌ ಬಳಸುವ ವಿದ್ಯುತ್‌ಗೆ ಶೇ 50ರಷ್ಟು ಸಬ್ಸಿಡಿಯನ್ನು ಅವರು ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.