ADVERTISEMENT

ಸಾಧ್ಯವಾದಷ್ಟು ಜನರಿಗೆ ನೆರವಾಗಿ: ಆಪ್‌ ಸ್ವಯಂ ಸೇವರಿಗೆ ಕೇಜ್ರಿವಾಲ್ ಮನವಿ

ಆಮ್ ಆದ್ಮಿ ಪಾರ್ಟಿಯ 8ನೇ ಸಂಸ್ಥಾಪನಾ ದಿನ

ಪಿಟಿಐ
Published 26 ನವೆಂಬರ್ 2020, 7:27 IST
Last Updated 26 ನವೆಂಬರ್ 2020, 7:27 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ‘ದೇಶ ಮತ್ತು ಜನ ಸಂಕಷ್ಟದಲ್ಲಿದ್ದಾರೆ. ನಮ್ಮ ಪಕ್ಷದ ಸ್ವಯಂ ಸೇವಕರು ಸಾಧ್ಯವಿರುವ ಎಲ್ಲ ಹಂತಗಳಲ್ಲೂ ಜನರ ಸಹಾಯಕ್ಕೆ ನಿಲ್ಲಬೇಕು ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ ಕೇಜ್ರಿವಾಲ್ ಮನವಿ ಮಾಡಿದರು.

ಆಮ್ ಆದ್ಮಿ ಪಕ್ಷದ 8ನೇ ಸಂಸ್ಥಾಪನಾ ದಿನದ ನೆನಪಿನಲ್ಲಿ ಗುರುವಾರ ಟ್ವೀಟ್ ಮಾಡಿರುವ ಅವರು, ‘ಈ ಸಮಯದಲ್ಲಿ ಯಾವುದೇ ರಾಜಕೀಯ ಮಾಡಬಾರದು. ಪಕ್ಷದ ಕಾರ್ಯಕರ್ತರು ಜನರ ಸೇವೆಗೆ ನಿಲ್ಲಬೇಕು‘ ಎಂದು ತಿಳಿಸಿದ್ದಾರೆ.

‘ಇಂದು ನಮ್ಮ ಪಕ್ಷದ ಎಂಟನೇ ಪ್ರತಿಷ್ಠಾನ ದಿನ. ನಿಮ್ಮೆಲ್ಲರಿಗೂ ಅಭಿನಂದನೆಗಳು. ಸಂಕಷ್ಟದ ಈ ಸಮಯದಲ್ಲಿ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಜನರಿಗೆ ನೆರವಾಗಿ. ಮಾಸ್ಕ್ ವಿತರಿಸಿ, ಅನಾರೋಗ್ಯದಿಂದ ಬಳಲುವವರಿಗೆ ಆಸ್ಪತ್ರೆಗೆ ಹೋಗಲು ವಾಹನ ವ್ಯವಸ್ಥೆ ಕಲ್ಪಿಸಿ. ಹಸಿದವರಿಗೆ ಆಹಾರ ನೀಡಿ. ಈ ಸಮಯದಲ್ಲಿ ಯಾವುದೇ ರಾಜಕೀಯ ಮಾಡಬೇಡಿ‘ ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.