ADVERTISEMENT

ಕೇರಳ: ಆಯುರ್ವೇದ ಚಿಕಿತ್ಸೆಗೆ ಬಂದ ಕೀನ್ಯಾದ ಮಾಜಿ ಪ್ರಧಾನಿ ಹೃದಯಸ್ತಂಭನದಿಂದ ನಿಧನ

ಕೇರಳಕ್ಕೆ ಆಯುರ್ವೇದ ಚಿಕಿತ್ಸೆಗೆ ಬಂದ ಕೀನ್ಯಾದ ಮಾಜಿ PM ಹೃದಯಸ್ತಂಭನದಿಂದ ನಿಧನ

ಪಿಟಿಐ
Published 15 ಅಕ್ಟೋಬರ್ 2025, 6:30 IST
Last Updated 15 ಅಕ್ಟೋಬರ್ 2025, 6:30 IST
<div class="paragraphs"><p>ರೈಲಾ ಒಂಡಿಗಾ</p></div>

ರೈಲಾ ಒಂಡಿಗಾ

   

(ಪಿಟಿಐ ಸಂಗ್ರಹ ಚಿತ್ರ)

ಕೊಚ್ಚಿ: ಕೆನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು ಹೃದಯ ಸ್ತಂಭನದಿಂದ ಕೇರಳದ ಎರ್ನಾಕುಲಂನ ಕೊತ್ತಾಟ್ಟುಕುಳಂನಲ್ಲಿ ಬುಧವಾರ ಮೃತಪಟ್ಟರು. ಆಯುರ್ವೇದ ಚಿಕಿತ್ಸೆ ಪಡೆಯಲು ಅವರು ಇಲ್ಲಿಗೆ ಬಂದಿದ್ದರು. 

ADVERTISEMENT

ಇಲ್ಲಿರುವ ಕಣ್ಣಿನ ಆಯುರ್ವೇದ ಚಿಕಿತ್ಸಾಲಯದಲ್ಲಿ ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ವೇಳೆ ಒಡಿಂಗಾ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. 

ಒಡಿಂಗಾ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಒಡಿಂಗಾ ಹಾಗೂ ಅವರ ಕುಟುಂಬ ಸದಸ್ಯರು ಈ ಚಿಕಿತ್ಸಾಲಯಕ್ಕೆ ಬರುತ್ತಿದ್ದರು. ಇಲ್ಲಿ ಅವರ ಪುತ್ರಿ ತಮ್ಮ ದೃಷ್ಟಿಯನ್ನು ಮರಳಿ ಪಡೆದರು ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.