ADVERTISEMENT

ಬಿಜೆಪಿ ಸೇರಿದ ‘ಮೆಟ್ರೋಮ್ಯಾನ್‌’: ರಾಜಕೀಯದ ಹೊಸ ಇನ್ನಿಂಗ್ಸ್‌ ಶುರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 13:09 IST
Last Updated 26 ಫೆಬ್ರುವರಿ 2021, 13:09 IST
ಇ. ಶ್ರೀಧರನ್
ಇ. ಶ್ರೀಧರನ್   

ತಿರುವನಂತಪುರಂ: ‘ಮೆಟ್ರೋಮ್ಯಾನ್‌’ ಖ್ಯಾತಿಯ 88 ವರ್ಷದ ಇ. ಶ್ರೀಧರನ್‌ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ರಾಜಕಾರಣದ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಪಕ್ಷದ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್‌ ನೇತೃತ್ವದಲ್ಲಿ ಕೇರಳದಾದ್ಯಂತ ಹಮ್ಮಿಕೊಂಡಿರುವ ‘ವಿಜಯ ಯಾತ್ರೆ’ಯು ಗುರುವಾರ ಮಲ್ಲಪ್ಪುರಂಗೆ ತಲುಪಿದಾಗ ನಡೆದ ಬಹಿರಂಗ ಸಭೆಯಲ್ಲಿ ಪಕ್ಷದ ನಾಯಕರು ಶ್ರೀಧರನ್‌ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು. ಕೇಂದ್ರ ಸಚಿವ ಆರ್‌.ಕೆ. ಸಿಂಗ್‌ ಮತ್ತುಪಕ್ಷದ ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮಾತನಾಡಿದ ಇ. ಶ್ರೀಧರನ್‌ ‘ಕಳೆದ 67 ವರ್ಷಗಳಿಂದ ಸರ್ಕಾರದ ಜತೆಗೆ ಕೆಲಸ ಮಾಡಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿರುವೆ. ಈಗ ರಾಜ್ಯಕ್ಕಾಗಿ ಕೆಲಸ ಮಾಡಲು ಬಯಸಿರುವೆ. ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕೆಲಸ ಮಾಡಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಹಾಗಾಗಿ ನಾನು ಬಿಜೆಪಿ ಸೇರಿದ್ದೇನೆ. ಇದಕ್ಕೆ ಅವಕಾಶ ಕಲ್ಪಿಸಿದ ಪಕ್ಷದ ನಾಯಕರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.