ADVERTISEMENT

ಕೇರಳದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ರೊಬೊಟಿಕ್ಸ್ ಶಿಕ್ಷಣ

ಪಿಟಿಐ
Published 18 ಮೇ 2025, 9:35 IST
Last Updated 18 ಮೇ 2025, 9:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿರುವನಂತಪುರ: ಕೇರಳದಲ್ಲಿ ಜೂನ್‌ 2 ರಿಂದ ಆರಂಭವಾಗುವ ಹೊಸ ಶೈಕ್ಷಣಿಕ ವರ್ಷದಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್‌ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ರೊಬೊಟಿಕ್ಸ್‌ ಶಿಕ್ಷಣವನ್ನು ಕಡ್ಡಾಯಗೊಳಿಸಿದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. 

ಇದರಿಂದ 4.3 ಲಕ್ಷ ವಿದ್ಯಾರ್ಥಿಗಳು ರೊಬೊಟಿಕ್ಸ್‌ ಶಿಕ್ಷಣ ಪಡೆಯಲಿದ್ದಾರೆ.

ADVERTISEMENT

ಹತ್ತನೇ ತರಗತಿಯ ಐಸಿಟಿ ಪಠ್ಯಪುಸ್ತಕದಲ್ಲಿ, ವಿಶೇಷವಾಗಿ ಮೊದಲ ಸಂಪುಟದಲ್ಲಿರುವ ‘ದಿ ವರ್ಲ್ಡ್ ಆಫ್ ರೊಬೊಟ್ಸ್‌’ ಎಂಬ ಶೀರ್ಷಿಕೆಯ ಆರನೇ ಅಧ್ಯಾಯಕ್ಕೆ ರೊಬೊಟಿಕ್ಸ್ ಅನ್ನು ತೊಡಗಿಸಿಕೊಳ್ಳಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಆಕರ್ಷಕ ಚಟುವಟಿಕೆಗಳು, ರೊಬೊಟಿಕ್ಸ್ ಪರಿಕಲ್ಪನೆ ಬಗ್ಗೆ ತಿಳಿದುಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಅಧ್ಯಾಯದಲ್ಲಿ ಸರ್ಕ್ಯೂಟ್ ನಿರ್ಮಾಣ, ಸಂವೇದಕಗಳು ಮತ್ತು ಆಕ್ಟಿವೇಟರ್‌ಗಳನ್ನು ಬಳಸುವುದು ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಳಸಿ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುವ ಕುರಿತಾದ ಮಾಹಿತಿಯಿದೆ ಎಂದು ಹೇಳಲಾಗಿದೆ.

ಈಗಾಗಲೇ ಕೇರಳ ಸರ್ಕಾರ ರಾಜ್ಯದಾದ್ಯಂತ ಪ್ರೌಢಶಾಲೆಗಳಿಗೆ 29,000 ರೊಬೊಟಿಕ್ ಕಿಟ್‌ಗಳನ್ನು ವಿತರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.