ADVERTISEMENT

Kerala Elections: ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿಗೆ ಕೇವಲ 103 ಮತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2025, 13:03 IST
Last Updated 13 ಡಿಸೆಂಬರ್ 2025, 13:03 IST
   

ಮುನ್ನಾರ್‌: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಸರಿನ ಮೂಲಕವೇ ಕುತೂಹಲ ಮೂಡಿಸಿದ್ದ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಅವರು ಸೋಲನುಭವಿಸಿದ್ದಾರೆ.

ಕೇರಳದ ಮುನ್ನಾರ್‌ ಪಂಚಾಯತ್‌ನ 16ನೇ ವಾರ್ಡ್‌ ಆಗಿರುವ ನಲ್ಲತಣ್ಣಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 34 ವರ್ಷದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಕೇವಲ 103 ಮತಗಳು ಲಭಿಸಿವೆ.

ADVERTISEMENT

ನಲ್ಲತಣ್ಣಿ ವಾರ್ಡ್‌ನಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ಯುಡಿಎಫ್‌ ಅಭ್ಯರ್ಥಿಯಾಗಿದ್ದ ಮಂಜುಳಾ ರಮೇಶ್‌ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯು ಮತದಾನವು ಡಿ.9 ಮತ್ತು ಡಿ.11 ರಂದು ಎರಡು ಹಂತಗಳಲ್ಲಿ ಜರುಗಿತ್ತು. ಡಿ.13ರಂದು ಫಲಿತಾಂಶ ಪ್ರಕಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.