ADVERTISEMENT

₹1,500 ಕೋಟಿ ಅನುದಾನ ತಡೆ ಹಿಡಿದ ಕೇಂದ್ರ: ಕೇರಳ ಆರೋಪ

ಪಿಟಿಐ
Published 13 ಮೇ 2025, 14:25 IST
Last Updated 13 ಮೇ 2025, 14:25 IST
 ಪಿಣರಾಯಿ ವಿಜಯನ್
 ಪಿಣರಾಯಿ ವಿಜಯನ್   

ತಿರುವನಂತಪುರ: ‘ಪಿಎಂಶ್ರೀ ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಬರಬೇಕಾದ ₹1,500 ಕೋಟಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರವು ತಡೆ ಹಿಡಿದಿದೆ’ ಎಂದು ಕೇರಳ ಸರ್ಕಾರ ಮಂಗಳವಾರ ಆರೋಪಿಸಿದೆ.

ಕೇಂದ್ರದ ಈ ಕ್ರಮದ ವಿರುದ್ಧ ಕಾನೂನಾತ್ಮ ಹೋರಾಟ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಕೇಂದ್ರದ ಮೇಲೆ ಒತ್ತಡ ಹೇರಲು ಪ್ರತಿಭಟನೆಯ ದಾರಿಯನ್ನು ಹಿಡಿಯುವುದಾಗಿಯೂ ಹೇಳಿದೆ. ಈ ಬಗ್ಗೆ ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅವರು ಮಾಹಿತಿ ನೀಡಿದರು.

‘ತಮಿಳುನಾಡು ಸರ್ಕಾರ ದಾಖಲಿಸಿದ್ದ ಅರ್ಜಿಯ ಕುರಿತು ಇತ್ತೀಚೆಗಷ್ಟೇ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌, ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎಇಪಿ) ಜಾರಿ ಮಾಡಲೇಬೇಕು ಎನ್ನುವ ಕಡ್ಡಾಯ ರಾಜ್ಯಗಳಿಗೆ ಇಲ್ಲ’ ಎಂದಿದೆ. ಇದೇ ತೀರ್ಪನ್ನು ಇಟ್ಟುಕೊಂಡು ನಾವೂ ಕೂಡ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ’ ಎಂದು ಶಿವಕುಟ್ಟಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.