ADVERTISEMENT

ಆನ್‌ಲೈನ್ ರಮ್ಮಿ ಪ್ರಕರಣ: ವಿರಾಟ್ ಕೊಹ್ಲಿ, ತಮನ್ನಾಗೆ ಕೇರಳ ಹೈಕೋರ್ಟ್ ನೋಟಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2021, 11:08 IST
Last Updated 27 ಜನವರಿ 2021, 11:08 IST
ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ತಿರುವನಂತಪುರ: ಆನ್‌ಲೈನ್ ರಮ್ಮಿ ಗೇಮ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ತಮನ್ನಾ ಭಾಟಿಯಾ ಹಾಗೂ ನಟ ಅಜು ವರ್ಗೀಸ್‌ ಅವರಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ. ಇವರು ಆನ್‌ಲೈನ್ ರಮ್ಮಿ ಗೇಮ್‌ ಪ್ರಚಾರ ರಾಯಭಾರಿಗಳಾಗಿದ್ದಾರೆ.

ಆನ್‌ಲೈನ್ ರಮ್ಮಿ ಗೇಮ್‌ಗೆ ನಿಷೇಧ ಹೇರಬೇಕು ಎಂಬ ಮನವಿಯೊಂದಕ್ಕೆ ಸಂಬಂಧಿಸಿ ಈ ನೋಟಿಸ್ ನೀಡಲಾಗಿದೆ. ಈ ವಿಚಾರದ ಕುರಿತು ನಿಲುವು ತಿಳಿಸುವಂತೆ ಕೇರಳ ಸರ್ಕಾರಕ್ಕೂ ಹೈಕೋರ್ಟ್‌ ಸೂಚಿಸಿದೆ.

ಆನ್‌ಲೈನ್ ಜೂಜಿನ ಸೈಟ್‌ಗಳು ಮುಗ್ದ ಯುವಕರ ಪ್ರಾಣಕ್ಕೆ ಎರವಾಗುತ್ತಿದ್ದು, ಅಂಥವುಗಳನ್ನು ಪ್ರಚೋದಿಸುವ ವಿರಾಟ್ ಕೊಹ್ಲಿ ಮತ್ತು ತಮನ್ನಾ ಭಾಟಿಯಾ ಅವರನ್ನು ಬಂಧಿಸಬೇಕು ಎಂದು ಮನವಿ ಮಾಡಿ ವಕೀಲ ಎ.ಪಿ.ಸೂರ್ಯಪ್ರಕಾಶಂ ಎಂಬುವವರು 2020ರ ಆಗಸ್ಟ್‌ನಲ್ಲಿ ಮದ್ರಾಸ್ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು.

ಆನ್‌ಲೈನ್‌ ಜೂಜಿನ ವಿಚಾರದಲ್ಲಿ ಯುವಕರ ಹಾದಿ ತಪ್ಪಿಸಿದ್ದಕ್ಕಾಗಿ ಮತ್ತು ಅಂತಹ ಸೈಟ್‌ಗಳಿಗೆ ಉತ್ತೇಜನ ನೀಡಿದ್ದಕ್ಕಾಗಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಅರ್ಜಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.