
ಕೇರಳ ಲಾಟರಿ ತಿರುವೋಣಂ ಬಂಪರ್
(ಚಿತ್ರ ಕೃಪೆ: X/@DDNewsMalayalam)
ತಿರುವನಂತಪುರ: ಕೇರಳ ಸರ್ಕಾರದ ತಿರುಓಣಂ ಬಂಪರ್ ಲಾಟರಿಯಲ್ಲಿ ಪೇಂಟ್ ಅಂಗಡಿಯ ಕಾರ್ಮಿಕರೊಬ್ಬರು ಬರೋಬ್ಬರಿ ₹25 ಕೋಟಿ ಬಹುಮಾನವನ್ನು ಪಡೆದಿದ್ದಾರೆ.
ಆಲಪ್ಪುಳ ನಿವಾಸಿ, ಕೊಚ್ಚಿಯ ಪೇಂಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶರತ್ ಎಸ್.ನಾಯರ್ ಅವರು ₹500 ಕೊಟ್ಟು ಖರೀದಿಸಿದ ಲಾಟರಿ ಟಿಕೆಟ್, ಅವರನ್ನು ಕೋಟ್ಯಧಿಪತಿಯನ್ನಾಗಿಸಿದೆ. ಶನಿವಾರ ಬಹುಮಾನ ಘೋಷಣೆಯಾಗಿದ್ದು, ಶರತ್ ಅವರು ಸೋಮವಾರ ಬ್ಯಾಂಕ್‌ನಲ್ಲಿ ಚೆಕ್ ಜಮೆ ಮಾಡಿದರು.
ನೆಟ್ಟೂರಿನಲ್ಲಿರುವ ಏಜೆಂಟ್ ಲತೀಶ್ ಎಂಬವರಿಂದ ಶರತ್ ಟಿಕೆಟ್ ಖರೀದಿಸಿದ್ದರು.
‘ಇದೇ ಮೊದಲ ಬಾರಿ ನಾನು ಬಂಪರ್ ಟಿಕೆಟ್ ಅನ್ನು ಖರಿದೀಸಿದ್ದು, ಮೊದಲು ಸಣ್ಣ ಬಹುಮಾನಗಳನ್ನು ಹೊಂದಿದ್ದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೆ’ ಎಂದು ಶರತ್ ಅವರು ಹೇಳಿದ್ದಾರೆ.
ಕೇರಳ ರಾಜ್ಯ ಲಾಟರಿ ಇಲಾಖೆ ನಡೆಸುವ ಲಾಟರಿಗಳಲ್ಲಿ ‘ತಿರುಓಣಂ ಬಂಪರ್’ ಅತೀ ಹೆಚ್ಚು ಬಹುಮಾನವನ್ನು ಹೊಂದಿರುವ ಲಾಟರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.