ಹುಂಜ
Credit: iStock Photo
ತಿರುವನಂತಪುರ: ಮುಂಜಾನೆ 3 ಗಂಟೆಗೆ ಹುಂಜವೊಂದು (ಕೋಳಿ) ಕೂಗುವ ಮೂಲಕ ನಿದ್ರೆಗೆ ಭಂಗ ಉಂಟು ಮಾಡುತ್ತಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಳ್ಳಿಕಲ್ ಗ್ರಾಮದ ವಯೋವೃದ್ಧರೊಬ್ಬರು ದೂರು ದಾಖಲಿಸಿದ್ದಾರೆ.
ಪ್ರತಿದಿನ ಮುಂಜಾನೆ 3 ಗಂಟೆ ಸುಮಾರಿಗೆ ನೆರೆಮನೆಯ ಹುಂಜವೊಂದು ಪಟ್ಟುಬಿಡದೆ ಕೂಗಲು ಪ್ರಾರಂಭಿಸುತ್ತದೆ. ಹುಂಜದ ಗದ್ದಲಕ್ಕೆ ನೆಮ್ಮದಿಯ ನಿದ್ರೆಯೇ ದುಸ್ತರವಾಗಿದ್ದು, ಶಾಂತಿಯುತ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಸಂತ್ರಸ್ತ ರಾಧಾಕೃಷ್ಣ ಕುರುಪ್ ಅಳಲು ತೊಡಿಕೊಂಡಿದ್ದಾರೆ.
ಅನಿಲ್ ಕುಮಾರ್ ಅವರಿಗೆ ಸೇರಿದ ಹುಂಜದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಧಾಕೃಷ್ಣ ಅವರು ಅಡೂರು ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್‌ಡಿಒ) ದೂರು ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಸಲಾಯಿತು. ಹುಂಜದಿಂದ ರಾಧಾಕೃಷ್ಣ ಅವರಿಗೆ ನಿಜವಾಗಿಯೂ ತೊಂದರೆಯಾಗುತ್ತಿದೆ ಎಂಬುದು ದೃಢಪಟ್ಟಿದೆ ಎಂದು ಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣವೇ ಕೋಳಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿರುವ ಆರ್‌ಡಿಒ ಅಧಿಕಾರಿಗಳು, ಇದಕ್ಕೆ 14 ದಿನಗಳ ಗಡುವು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.