
ಖಾದ್ಯ
ಕೊಯಿಕ್ಕೋಡ್: ‘ಕೇರಳ ಸ್ಟೋರಿ 2’ ಚಿತ್ರದ ವಿರುದ್ಧ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ನಡೆಸಿದ ‘ಗೋಮಾಂಸ ಉತ್ಸವ’ವನ್ನು ಮುಸ್ಲಿಂ ಲೀಗ್ ಭಾನುವಾರ ಟೀಕಿಸಿದ್ದು, ಇದನ್ನು ‘ಪ್ರಚೋದನಕಾರಿ ಪ್ರತಿಭಟನೆ’ ಎಂದು ಹೇಳಿದೆ.
‘ಗೋಮಾಂಸ ಉತ್ಸವವು ಮುಸ್ಲಿಂ ಮತದಾರರನ್ನು ದಾರಿ ತಪ್ಪಿಸಲು, ವಂಚಿಸಲು ಮತ್ತು ಓಲೈಸಲು ಸಿಪಿಎಂ ಮಾಡಿರುವ ಅಗ್ಗದ ಗಿಮಿಕ್’ ಎಂದು ಮುಸ್ಲಿಂ ಲೀಗ್‌ನ ರಾಜ್ಯ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಆರೋಪಿಸಿದ್ದಾರೆ.
‘ಯಾವುದೇ ಸಮುದಾಯಕ್ಕೂ, ಗೋಮಾಂಸಕ್ಕೂ ಸಂಬಂಧ ಇಲ್ಲ. ಭಾರತದ ಕೆಲವು ಬೃಹತ್ ಗೋಮಾಂಸ ರಫ್ತುದಾರರು ಮತ್ತು ಸಂಸ್ಕರಣಾ ಘಟಕಗಳ ಮಾಲೀಕರಲ್ಲಿ ಬಿಜೆಪಿ, ಆರ್.ಎಸ್.ಎಸ್. ಮತ್ತು ಮುಸ್ಲಿಮರೊಂದಿಗೆ ಸಂಬಂಧ ಹೊಂದಿರುವ ಜನರು ಇದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಕೇರಳ ಸ್ಟೋರಿ 2’ ಚಿತ್ರವನ್ನು ಟೀಕಿಸಿದ ಸಲಾಂ ಅವರು, ‘ಗೋಮಾಂಸ ತಿನ್ನದವರನ್ನು ಯಾರೂ ತಿನ್ನಿ ಎಂದು ಒತ್ತಾಯಿಸುತ್ತಿಲ್ಲ. ಇಂತಹ ಚಿತ್ರಗಳು ಸಮುದಾಯಗಳ ನಡುವೆ ವಿಭಜನೆಯನ್ನು ಸೃಷ್ಟಿಸುತ್ತವೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.