ಎಐ ಚಿತ್ರ
ಕೊಲ್ಲಂ: ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯು ಕೊನೆಯುಸಿರೆಳೆದ ಘಟನೆಯು ಕೇರಳದ ನಡುವತ್ತೂರಿನಲ್ಲಿ ಜರುಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶ್ಯಾಮಸುಂದರ(41) ಎನ್ನುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ಧನುಷ್(37) ಅವರನ್ನು ಬಂಧಿಸಲಾಗಿದೆ.
ನಾಲ್ಕು ವರ್ಷದ ಹಿಂದೆ ಇಬ್ಬರಿಗೂ ಜಗಳವಾಗಿತ್ತು. ನಂತರ ಶ್ಯಾಮಸುಂದರ ಅವರ ಪತ್ನಿ ಹಾಗೂ ಮಗು, ಆರೋಪಿಯ ಜೊತೆಯಲ್ಲೇ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಮತ್ತೆ ಅವರಿಬ್ಬರ ನಡುವೆ ಜಗಳವಾಗಿತ್ತು. ತನ್ನ ಪತ್ನಿಯನ್ನು ಉಪಯೋಗಿಸಿಕೊಂಡು, ಆಸ್ತಿ ಕಬಳಿಸುವ ಪ್ರಯತ್ನ ಮಾಡುತ್ತಿರುವುದಾಗಿ ಶ್ಯಾಮಸುಂದರ ಅವರು ಧನುಷ್ ಮೇಲೆ ಆರೋಪಿಸಿದ್ದರು. ನೆರೆಹೊರೆಯವರು ಜಗಳ ಬಿಡಿಸಿದ್ದರು. ಆದರೆ, ನಂತರ ಆರೋಪಿಯು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯರು ತಕ್ಷಣವೇ ಶ್ಯಾಮಸುಂದರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.