ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಆಲಪ್ಪುಳ : ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್‌ನಲ್ಲಿರುವ ದೇವಸ್ಥಾನದ ಆನೆ ಇಬ್ಬರು ಮಾವುತರ ಮೇಲೆ ದಾಳಿ ನಡೆಸಿದೆ. ಇದರ ಪರಿಣಾಮ ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಸ್ಕಂದನ್ ಎಂಬ ಆನೆಗೆ ಮದವೇರಿತ್ತು. ಹೀಗಾಗಿ ದೇವಸ್ಥಾನದ ಅರ್ಚಕರ ಮನೆಯಲ್ಲಿ ಕಟ್ಟಿಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಮದವೇರಿದ ಸ್ಕಂದನ್ ಆನೆ ಏಕಾಏಕಿ, ಸುನಿಲ್ ಕುಮಾರ್ ಎಂಬ ಮಾವುತನ ಮೇಲೆ ದಾಳಿ ನಡೆಸಿದೆ.
ಘಟನೆ ಬಳಿಕ ಸ್ಕಂದನ್ ಆನೆ ನಿರ್ವಾಹಕ ಮುರಳೀಧರನ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾದರು.
ದೇವಸ್ಥಾನಕ್ಕೆ ಸ್ಥಳಾಂತರಿಸುವಾಗ ಮತ್ತೆ ಕೋಪಗೊಂಡ ಸ್ಕಂದನ್, ನಿರ್ವಾಹಕ ಮುರಳೀಧರನ್ ಅವರ ಮೇಲೂ ಗಂಭೀರವಾಗಿ ದಾಳಿ ನಡೆಸಿತು.
ನಿರ್ವಾಹಕ ಮುರಳೀಧರನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಮೃತ ಪಟ್ಟಿದ್ದಾರೆ. ಗಾಯಳು ಸುನಿಲ್ ಕುಮಾರ್ ಸ್ಥಿತಿಯೂ ಗಂಭೀರವಾಗಿದೆ ಎಂದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.