
ಪಿಟಿಐ
ಮುಂಬೈ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಂಬೈನ ಮಾನ್ ಖುರ್ದ್ ಹಾಗೂ ಘಾಟ್‌ಕೋಪರ್‌ನಲ್ಲಿ ನಡೆದ ಮೊಸರು ಗಡಿಗೆ ಒಡೆಯುವ ಧಾರ್ಮಿಕ ಉತ್ಸವದ ವೇಳೆ ಮೇಲಿಂದ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಮತ್ತು 95 ಮಂದಿ ಗಾಯಗೊಂಡಿದ್ದಾರೆ.
ವಾಣಿಜ್ಯ ನಗರಿ ಮುಂಬೈ, ಠಾಣೆ ಮತ್ತಿತರ ಭಾಗಗಳಲ್ಲಿ ಭಾರಿ ಮಳೆಯ ನಡುವೆಯೂ ‘ದಹಿ ಹಂಡಿ’ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಲವು ಕಡೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.