ADVERTISEMENT

ಅಸ್ಸಾಂ ಗಣಿಯೊಳಗೆ ಸಿಲುಕಿರುವ ಕಾರ್ಮಿಕರು: ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಏಜೆನ್ಸೀಸ್
Published 8 ಜನವರಿ 2025, 4:36 IST
Last Updated 8 ಜನವರಿ 2025, 4:36 IST
ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್‌ ಎಸ್‌ಡಿಆರ್‌ಎಫ್‌ ಹಾಗೂ ಸೇನಾ ತಂಡಗಳು ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಸಿದವು –ಪಿಟಿಐ ಚಿತ್ರ
ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್‌ ಎಸ್‌ಡಿಆರ್‌ಎಫ್‌ ಹಾಗೂ ಸೇನಾ ತಂಡಗಳು ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಸಿದವು –ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂನ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ದಿಮಾ ಹಸಾವೊ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ 9 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಬುಧವಾರ ಬೆಳಗ್ಗೆಯಿಂದ ಮುಂದುವರೆದಿದೆ.

ನಿನ್ನೆ ಸಂಜೆ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದ್ದು ಆದಷ್ಟೂ ಬೇಗ ಸಂತ್ರಸ್ತರಿರುವ ಸ್ಥಳವನ್ನು ತಲುಪಿ ರಕ್ಷಣೆ ಮಾಡಲಾಗವುದು ಎಂದು ಎನ್‌ಡಿಆರ್‌ಎಫ್‌ ಹಿರಿಯ ಅಧಿಕಾರಿ ತಿವಾರಿ ಹೇಳಿದ್ದಾರೆ. 

‘35 ಸದಸ್ಯರ ಎನ್‌ಡಿಆರ್‌ಎಫ್‌ ತಂಡ ಹಾಗೂ ಎಸ್‌ಡಿಆರ್‌ಎಫ್‌ ತಂಡ ಮತ್ತು ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ADVERTISEMENT

‘ಗಣಿ ಸುರಂಗವು ಸುಮಾರು 150 ಅಡಿ ಆಳದಲ್ಲಿದೆ. ಇದರಲ್ಲಿ 100 ಅಡಿಗಳ ವರೆಗೆ ನೀರು ತುಂಬಿದೆ. ಮಂಗಳವಾರ ಬೆಳಿಗ್ಗಿನಿಂದ 30ರಿಂದ 35 ಅಡಿ ಆಳದವರೆಗೆ ಇಳಿಯಲು ಮಾತ್ರ ಸಾಧ್ಯವಾಯಿತು. ನೌಕಾ ಪಡೆಯ ಈಜು ತಜ್ಞರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಇಂದು ಗಣಿ ಸುರಂಗವನ್ನು ತಲುಪುವ ವಿಶ್ವಾಸವಿದೆ ಎಂದು ಅವರು ಹೇಳಿದರು. 

ನೀರಿನಲ್ಲಿ ತೇಲುತ್ತಿದ್ದ ಮೂವರ ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ನೋಡಿದ್ದಾರೆ. ಆದರೆ, ಮೃತದೇಹಗಳನ್ನು ಇನ್ನೂವರೆಗೂ ಹೊರಗೆ ತೆಗೆದಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಣಿಯಲ್ಲಿ ಸಿಲುಕಿಕೊಂಡಿರುವ ಎಲ್ಲರೂ ಮೃತಪಟ್ಟಿರಬಹುದು ಎಂದು ಅವರು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.