ಲೇಹ್/ಜಮ್ಮು: ಕೇಂದ್ರದ ಶಾಸನಕ್ಕೆ ಅನುಗುಣವಾಗಿ ಹೊಸ ಮೀಸಲಾತಿ (ತಿದ್ದುಪಡಿ) ನೀತಿ ಸಂಬಂಧ ಲಡಾಖ್ ಆಡಳಿತವು ಭಾನುವಾರ ಅಧಿಸೂಚನೆ ಹೊರಡಿಸಿದೆ.
ಮೀಸಲಾತಿ ಕೋಟಾ ಹಾಗೂ ನೇಮಕಾತಿ ಕಾರ್ಯವಿಧಾನಗಳನ್ನು ಪುನರ್ ರಚಿಸಲು ಸೂಚಿಸಿದೆ.
ನೇಮಕಾತಿ ಮತ್ತು ಮೀಸಲಾತಿ ನೀತಿಯಿಂದಾಗಿ ಲಡಾಖ್ ಆಡಳಿತವು ಮೈಲಿಗಲ್ಲು ಸಾಧಿಸಿದ್ದು, ಸ್ಥಳೀಯರು ಹಾಗೂ ಯುವಕರ ದೀರ್ಘಾವಧಿ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಮೀಸಲಾತಿ ತಿದ್ದುಪಡಿ ನಿಯಮದ ಪ್ರಕಾರ, ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗೆ ಶೇಕಡ 1, ಪರಿಶಿಷ್ಟ ಪಂಗಡಕ್ಕೆ ಶೇ 80, ವಾಸ್ತವ ನಿಯಂತ್ರಣ ರೇಖೆಗೆ ಹೊಂದಿಕೊಂಡ ಪ್ರದೇಶದ ನಿವಾಸಿಗಳಿಗೆ ಶೇ 4 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ದೊರೆಯಲಿದೆ. ಮಾಜಿ ಸೈನಿಕರಿಗೆ ಶೇ 6, ಅಂಗವಿಕಲರಿಗೆ ಶೇ 4ರಷ್ಟು ಮೀಸಲಾತಿ ಒಳಗೊಂಡಿದೆ ಎಂದು ಲಡಾಖ್‌ನ ಮುಖ್ಯ ಕಾರ್ಯದರ್ಶಿ ಪವನ್ ಕೊತ್ವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.