ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮನ್‌ಕೊಟಿಯಾ ಮತ್ತು ಲ್ಯಾನ್ಸ್ ದಫಾದಾರ್ ದಲ್ಜಿತ್ ಸಿಂಗ್
(ಚಿತ್ರ– @firefurycorps)
ಲೇಹ್: ಪೂರ್ವ ಲಡಾಖ್‌ನಲ್ಲಿ ಸೇನಾ ವಾಹನವೊಂದರ ಮೇಲೆ ಬುಧವಾರ ಬಂಡೆಯೊಂದು ಉರುಳಿಬಿದ್ದ ಪರಿಣಾಮ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಲ್ವಾನ್ ಸಮೀಪದ ಚಾರ್‌ಬಾಗ್‌ನಲ್ಲಿ ಇಂದು ಬೆಳಿಗ್ಗೆ 11ರ ಸುಮಾರಿಗೆ ಅವಘಡ ಸಂಭವಿಸಿದೆ.
ಮೃತರನ್ನು ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮನ್‌ಕೊಟಿಯಾ ಮತ್ತು ಲ್ಯಾನ್ಸ್ ದಫಾದಾರ್ ದಲ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತರಬೇತಿಯ ಭಾಗವಾಗಿ ಗಸ್ತು ನಡೆಸುತ್ತಿದ್ದ ವೇಳೆ ವಾಹನದ ಮೇಲೆ ಬಂಡೆ ಬಿದ್ದಿದ್ದು, ವಾಹನವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.