ADVERTISEMENT

ಅ.16ರಂದು ಲಡಾಖ್‌ ಗಿರಿ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಚುನಾವಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:52 IST
Last Updated 19 ಸೆಪ್ಟೆಂಬರ್ 2020, 12:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶ್ರೀನಗರ:ಲಡಾಖ್‌ ಗಿರಿ ಅಭಿವೃದ್ಧಿ ಸ್ವಾಯತ್ತ ಮಂಡಳಿಯ (ಎಲ್‌ಎಎಚ್‌ಡಿಸಿ) ಮತದಾನದ ವೇಳಾಪಟ್ಟಿಯನ್ನುಲಡಾಖ್ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಶನಿವಾರ ಪ್ರಕಟಿಸಿದ್ದಾರೆ.

ಚುನಾವಣಾ ವಿಭಾಗದ ಕಾರ್ಯದರ್ಶಿ ಸೌಗತ್ ಬಿಸ್ವಾಸ್ ಅಧಿಸೂಚನೆಯನ್ನು ಹೊರಡಿಸಿದ್ದು, ಮಂಡಳಿಯ 30 ಸ್ಥಾನಗಳ ಪೈಕಿ 26 ಸ್ಥಾನಗಳಿಗೆ ಅಕ್ಟೋಬರ್‌ 16ರಂದು ಚುನಾವಣೆ ನಡೆಯಲಿದೆ. ನಾಲ್ಕು ಸ್ಥಾನಗಳಿಗೆ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುತ್ತದೆ.

ಕೋವಿಡ್‌ ಬಿಕ್ಕಟ್ಟು ಮತ್ತು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಚುನಾವಣೆಯನ್ನು ಮುಂದೂಡುವಂತೆ ಈ ಹಿಂದೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.