ADVERTISEMENT

ಲಡಾಖ್‌: ಸಂರಕ್ಷಿತ ಪ್ರದೇಶಗಳ ಭೇಟಿಗೆ ವಿಧಿಸಿದ್ದ ನಿರ್ಬಂಧಗಳ ತೆರವು

ಚೀನಾ, ಪಾಕ್‌ ಗಡಿಯಲ್ಲಿರುವ ಸಂರಕ್ಷಿತ ಪ್ರದೇಶಗಳು: ಭಾರತೀಯರಿಗೂ ಪರವಾನಗಿ ಕಡ್ಡಾಯವಿತ್ತು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 10:36 IST
Last Updated 7 ಆಗಸ್ಟ್ 2021, 10:36 IST
ಪಾಂಗಾಂಗ್‌ ಸರೋವರ
ಪಾಂಗಾಂಗ್‌ ಸರೋವರ   

ಶ್ರೀನಗರ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಲಡಾಖ್‌ ಕೇಂದ್ರಾಡಳಿತ ಪ್ರದೇಶ ಆಡಳಿತವು ಕೆಲವು ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುವುದರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿದೆ.

ಚೀನಾ ಮತ್ತು ಪಾಕಿಸ್ತಾನ ಗಡಿಗಳಿಗೆ ಹೊಂದಿಕೊಂಡಿರುವ ಈ ಸಂರಕ್ಷಿತ ಪ್ರದೇಶಗಳಿಗೆ ಸ್ಥಳೀಯರು ಹಾಗೂ ಇತರ ರಾಜ್ಯಗಳ ಜನರು ಭೇಟಿ ನೀಡಬೇಕಿದ್ದರೆ ಪರವಾನಗಿ (ಇನ್ನರ್‌ ಲೈನ್‌ ಪರ್ಮಿಟ್‌) ಪಡೆಯಬೇಕು ಎಂಬುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ಈಗ ಈ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.

ನುಬ್ರಾ ಕಣಿವೆ, ಪಾಂಗಾಂಗ್‌ ಸರೋವರ, ತ್ಸೊಮೊರಿರಿ ಸರೋವರ, ಆರ್ಯನ್‌ ಗ್ರಾಮಗಳು ಸಂರಕ್ಷಿತ ಪ್ರದೇಶಗಳಾಗಿವೆ. ನುಬ್ರಾ ಕಣಿವೆಯಲ್ಲಿ ಡಿಸ್ಕಿಟ್‌, ಹಂಡರ್‌, ಸುಮರ್‌ ಹಾಗೂ ಪನಾಮಿಕ್‌ ಪ್ರದೇಶಗಳಿವೆ.

ADVERTISEMENT

ಈ ಪ್ರದೇಶಗಳಿಗೆ ಭೇಟಿ ನೀಡಲು ಬಯಸುವ ವಿದೇಶಿಯರು ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಪರವಾನಗಿಯ ಸಿಂಧುತ್ವದ ಅವಧಿಯನ್ನು ಈ ಮೊದಲಿದ್ದ ಏಳು ದಿನಗಳಿಂದ 15 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.