ADVERTISEMENT

Ladakh Protest: ಲಡಾಖ್ ಪ್ರತಿನಿಧಿಗಳೊಂದಿಗೆ 22ರಂದು ಸಭೆ

ಪಿಟಿಐ
Published 19 ಅಕ್ಟೋಬರ್ 2025, 14:30 IST
Last Updated 19 ಅಕ್ಟೋಬರ್ 2025, 14:30 IST
<div class="paragraphs"><p>ಲಡಾಕ್‌ನ ಬೀದಿಯ ಚಿತ್ರ</p></div>

ಲಡಾಕ್‌ನ ಬೀದಿಯ ಚಿತ್ರ

   

(ಸಂಗ್ರಹ ಚಿತ್ರ)

ಲೇಹ್‌: ‘ಅಕ್ಟೋಬರ್‌ 22ರಂದು ತನ್ನ ಉಪಸಮಿತಿ ಸಭೆಯಲ್ಲಿ ಭಾಗವಹಿಸುವಂತೆ ಗೃಹ ಸಚಿವಾಲಯವು ನೀಡಿದ ಆಹ್ವಾನವನ್ನು ಲಡಾಖ್‌ನ ಪ್ರತಿನಿಧಿಗಳು ಸ್ವೀಕರಿಸಿದ್ದಾರೆ’ ಎಂದು ಲೇಹ್‌ ಅಪೆಕ್ಸ್‌ ಬಾಡಿ ಸಹ ಅಧ್ಯಕ್ಷ ಚೆರಿಂಗ್‌ ದೊರ್ಜೆ ಲಕ್ರೂಕ್‌ ತಿಳಿಸಿದ್ದಾರೆ.

ADVERTISEMENT

ಆ ಮೂಲಕ ಕೇಂದ್ರದೊಂದಿಗಿನ ಮಾತುಕತೆಗೆ ಸಂಬಂಧಿಸಿದಂತೆ ತಿಂಗಳಿನಿಂದ ನಡೆಯುತ್ತಿದ್ದ ಬಿಕ್ಕಟ್ಟು ಕೊನೆಗೊಂಡಿದೆ.

‘ಲೇಹ್‌ ಅಪೆಕ್ಸ್‌ ಬಾಡಿ(ಎಲ್‌ಎಬಿ), ಕಾರ್ಗಿಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಕೆಡಿಎ)ನ ತಲಾ ಮೂವರು ಪ್ರತಿನಿಧಿಗಳು, ಲಡಾಖ್ ಸಂಸದ ಮೊಹಮ್ಮದ್‌ ಹನೀಫಾ ಹಾಗೂ ಅವರ ವಕೀಲರು ಭಾಗವಹಿಸಲಿದ್ದಾರೆ. ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು, ಕೇಂದ್ರಾಡಳಿತದ ಹಿತರಕ್ಷಿಸುವ ನಿಟ್ಟಿನಲ್ಲಿ ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಪ್ರಾಥಮಿಕ ಬೇಡಿಕೆಗೆ ಬದ್ಧವಾಗಿರಲಿದ್ದೇವೆ’ ಎಂದು ಲಾಕ್ರೂಕ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.