ADVERTISEMENT

Ladakh: ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿರುವ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ

14 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪಿಟಿಐ
Published 23 ಜುಲೈ 2025, 14:02 IST
Last Updated 23 ಜುಲೈ 2025, 14:02 IST
   

ಲಡಾಖ್‌: ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿರುವ ವಿಶ್ವವಿದ್ಯಾಲಯ ಎಂಬ ಖ್ಯಾತಿಗೆ ಭಾಜನವಾಗಿರುವ ಸಿಂಧು ಕೇಂದ್ರೀಯ ವಿಶ್ವವಿದ್ಯಾಲಯದ (ಎಸ್‌ಸಿಯು) ಮೊದಲ ಘಟಿಕೋತ್ಸವ ಮಂಗಳವಾರ ನಡೆಯಿತು.

ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್‌ ಬೌದ್ಧ ಸ್ಟಡೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಎಸ್‌ಸಿಯುನ ಮೊದಲ ಬ್ಯಾಚ್‌ನ 14 ವಿದ್ಯಾರ್ಥಿಗಳಿಗೆ ಲಡಾಖ್‌ನ ಮುಖ್ಯ ಕಾರ್ಯದರ್ಶಿ ಪವನ್‌ ಕೋಟ್ವಾಲ್‌ ಪದವಿ ಪ್ರಮಾಣಪತ್ರ ವಿತರಿಸಿದರು.

ಈ ಭಾಗದ ಶೈಕ್ಷಣಿಕ ವಲಯದ ಮಹತ್ವದ ಮೈಲಿಗಲ್ಲಿನ ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಸದಸ್ಯರು ಉಪಸ್ಥಿತರಿದ್ದರು.

ADVERTISEMENT

ಎಸ್‌ಸಿಯುನ ಮಾರ್ಗದರ್ಶಕ ಸಂಸ್ಥೆಯಾಗಿರುವ ಐಐಟಿ ಮದ್ರಾಸ್‌ನ ನಿರ್ದೇಶಕ ವಿ. ಕಾಮಕೋಟಿ ಮಾತನಾಡಿ, ‘ಸಮುದ್ರ ಮಟ್ಟದಿಂದ 3,500 ಮೀಟರ್‌ ಎತ್ತರದಲ್ಲಿರುವ ಖಾಲ್ಟ್ಸಿ ಗ್ರಾಮದಲ್ಲಿ 2028ರ ವೇಳೆಗೆ ವಿಶ್ವವಿದ್ಯಾಲಯವು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ. ಅಲ್ಲಿಯವರೆಗೆ ಲಡಾಖ್‌ನಲ್ಲಿ ಹೊಸದಾಗಿ ಉದ್ಘಾಟಿಸಲಾದ ಟ್ರಾನ್ಸಿಟ್‌ ಕ್ಯಾಂಪಸ್‌ನಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.