ADVERTISEMENT

ನಕಲಿ ರಾಸಾಯನಿಕ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 11:06 IST
Last Updated 12 ನವೆಂಬರ್ 2022, 11:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖೀಂಪುರ ಖೇರಿ (ಪಿಟಿಐ): ಸೂಕ್ಷ್ಮ ಪೋಷಕಾಂಶಗಳನ್ನು ತಯಾರಿಸಲು ಪರವಾನಗಿ ಹೊಂದಿದ್ದ ಇಲ್ಲಿಯ ಖಾಸಗಿ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿನಕಲಿ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಸಬ್‌ಡಿವಿಜನಲ್‌ ಮ್ಯಾಜಿಸ್ಟ್ರೇಟ್‌ ಶ್ರದ್ಧಾ ಸಿಂಗ್‌, ಹೆಚ್ಚುವರಿ ಎಸ್‌ಪಿ ಸಂದೀಪ್‌ ಸಿಂಗ್‌ ಮತ್ತು ಜಿಲ್ಲಾ ಕೃಷಿ ಅಧಿಕಾರಿ ಅರವಿಂದ್‌ ಕುಮಾರ್‌ ಚೌಧರಿ ಅವರನ್ನೊಳಗೊಂಡ ತಂಡ ಲಖೀಂಪುರ ಖೇರಿ ಜಿಲ್ಲೆಯ ರಾಜಪುರ ಕೈಗಾರಿಕಾ ಪ್ರದೇಶದ ಗೋವಿಂದ್‌ ಕೈಗಾರಿಕೆಗಳ ಆವರಣದ ಮೇಲೆ ದಾಳಿ ನಡೆಸಿತು.

ತಯಾರಕರು ತಮಗೆ ದೊರಕಿದ್ದ ಪರವಾನಗಿಯ ನಿಯಮಗಳನ್ನು ಉಲ್ಲಂಘಿಸಿ ನಕಲಿ ರಾಸಾಯನಿಕಗಳನ್ನು ತಯಾರಿಸುತ್ತಿದ್ದರು. ಜೊತೆಗೆ, ರಾಸಾಯನಿಕಗಳ ನಿಯಂತ್ರಣ ಆದೇಶ, ಅಗತ್ಯವಸ್ತುಗಳ ಕಾಯ್ದೆಗಳಂತಹ ನಿಯಮಗಳನ್ನು ಅವರು ಉಲ್ಲಂಘಿಸಿದ್ದಾರೆ. ತಯಾರಿಕಾ ಘಟಕದ ಮಾಲೀಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹಲವಾರು ದೊಡ್ಡ ಸಂಸ್ಥೆಗಳ ಹೆಸರುಗಳಿದ್ದ ಚೀಲಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಲ್ಲಿ ಸಂಗ್ರಹಿಸಲಾಗಿರುವ ರಾಸಾಯನಿಕಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.