ADVERTISEMENT

ಲಖಿಂಪುರ ಖೇರಿ ಪ್ರಕರಣ: ಸಚಿವರ ಪುತ್ರ ಆಶಿಶ್‌ ಮತ್ತೆ 2 ದಿನ ಪೊಲೀಸ್‌ ವಶಕ್ಕೆ 

ಪಿಟಿಐ
Published 22 ಅಕ್ಟೋಬರ್ 2021, 14:35 IST
Last Updated 22 ಅಕ್ಟೋಬರ್ 2021, 14:35 IST
ಪೊಲೀಸರ ವಶದಲ್ಲಿರುವ ಆಶಿಶ್‌ ಮಿಶ್ರಾ
ಪೊಲೀಸರ ವಶದಲ್ಲಿರುವ ಆಶಿಶ್‌ ಮಿಶ್ರಾ   

ಲಖಿಂಪುರ ಖೇರಿ (ಉತ್ತರ ಪ್ರದೇಶ): ಲಖಿಂಪುರ್ ಖೇರಿ ಹಿಂಸಾಚಾರಪ್ರಕರಣದಲ್ಲಿ ಬಂಧಿಯಾಗಿರುವ,ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಶುಕ್ರವಾರ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಲಖಿಂಪುರ್ ಖೇರಿಯ ಮುಖ್ಯ ನ್ಯಾಯಾಧೀಶ ಚಿಂತಾ ರಾಮ್ ಅವರು ಆಶಿಶ್‌ ಮಿಶ್ರಾ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ.

ಮಿಶ್ರಾ ಅಲ್ಲದೇ, ಇತರ ಮೂವರು ಆರೋಪಿಗಳಾದ ಅಂಕಿತ್ ದಾಸ್, ಶೇಖರ್ ಭಾರತಿ ಮತ್ತು ಲತೀಫ್ ಎಂಬುವವರನ್ನೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ADVERTISEMENT

ಉತ್ತರ ಪ್ರದೇಶದ ಲಖೀಂಪುರ ಖೇರಿ ಎಂಬಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರೂ ಸೇರಿ ಎಂಟು ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.