ADVERTISEMENT

ಐಪಿಎಲ್ ಮಾಜಿ ಬಾಸ್ ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ನಲ್ಲಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2022, 16:13 IST
Last Updated 14 ಜುಲೈ 2022, 16:13 IST
ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ
ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ   

ಬೆಂಗಳೂರು: ಭಾರತದಲ್ಲಿಇಂಡಿಯನ್ ಪ್ರಿಮೀಯರ್ ಲಿಗ್‌ ಅನ್ನು (ಐಪಿಎಲ್‌) ಹುಟ್ಟುಹಾಕಿದ್ದ ಉದ್ಯಮಿ ಹಾಗೂ ಈಗ ತೆರಿಗೆ ವಂಚನೆ ಪ್ರಕರಣದಲ್ಲಿಭಾರತ ತೊರೆದು ವಿದೇಶದಲ್ಲಿರುವ ಲಲಿತ್ ಮೋದಿ, ನಟಿ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ನಲ್ಲಿಇರುವುದನ್ನು ಸ್ವತಃ ಮೋದಿ ಅವರೇ ಬಹಿರಂಗಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಲಲಿತ್ ಮೋದಿ ಅವರು, ‘ಇವಾಗ ತಾನೇ ಮಾಲ್ಡೀವ್ಸ್ ವಿದೇಶ ಪ್ರವಾಸ ಮುಗಿಸಿ ಲಂಡನ್‌ಗೆ ಬಂದೆ, ಇಗೋ ನಿಮಗೆ ಈ ವಿಷಯ ತಿಳಿಸುತ್ತಿದ್ದೇನೆ. ಇದು ನನ್ನ ಹೊಸ ಜೀವನ, ಇಲ್ಲಿಂದ ಹೊಸ ಬಾಳ ಪಯಣ, ನನ್ನ ಬಾಳಲ್ಲಿ ಬಂದ ಪೂರ್ಣಚಂದಿರ’ ಎಂದು ಟ್ವೀಟ್ ಮಾಡಿ ಸುಶ್ಮಿತಾ ಜೊತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘ಅಲ್ಲದೇ ಸದ್ಯ ನಾವಿಬ್ಬರು ಇದೀಗ ಡೇಟಿಂಗ್‌ನಲ್ಲಿ ಮಾತ್ರ ಇದ್ದೇವೆ. ಮದುವೆ ಕೂಡ ಆಗಲಿದ್ದೇವೆ, ಆ ದಿನ ಮುಂದೆ ಬರುತ್ತೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ 2010 ರಲ್ಲಿ ಪಲಾಯನಗೈದಿರುವ ಲಲಿತ್ ಮೋದಿ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಇನ್ನು 1994 ರಲ್ಲಿ ಭುವನ ಸುಂದರಿಯಾಗಿದ್ದ ಹಾಗೂ ಬಾಲಿವುಡ್‌ನಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಸುಶ್ಮಿತಾ ಸೇನ್ ಈ ಸಂಬಂಧದ ಬಗ್ಗೆಮಾಹಿತಿ ನೀಡಿಲ್ಲ.

ಇನ್ನು ಸುಶ್ಮಿತಾ ಸೇನ್ ಅವರಿಗೆ ಈಗಾಗಲೇ ಎರಡು ದತ್ತು ಮಕ್ಕಳಿದ್ದಾರೆ. 2018 ರಿಂದ 2021ರವರೆಗೆ ಅವರು ಗಾಯಕ ರೋಹಮನ್ ಶಾವಲ್ ಜೊತೆ ಡೇಟಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.