ADVERTISEMENT

ಮೇವು ಹಗರಣ: ಸಿಬಿಐ ನ್ಯಾಯಾಲಯಕ್ಕೆ ಹಾಜರಾದ ಲಾಲು

ಪಿಟಿಐ
Published 23 ನವೆಂಬರ್ 2021, 8:45 IST
Last Updated 23 ನವೆಂಬರ್ 2021, 8:45 IST
ಲಾಲು ಪ್ರಸಾದ್‌
ಲಾಲು ಪ್ರಸಾದ್‌   

ಪಟ್ನಾ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್ಅವರು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದರು.

ಲಾಲು ಅವರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಕಳೆದ ವಾರ ಆದೇಶ ನೀಡಿದ್ದ ನ್ಯಾಯಾಧೀಶ ಪ್ರಜೇಶ್‌ ಕುಮಾರ್ ಅವರು ಮುಂದಿನ ವಿಚಾರಣೆಯನ್ನು ಇದೇ 30ಕ್ಕೆ ನಿಗದಿಪಡಿಸಿದರು.

ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಸುಮಾರು 200 ಸಾಕ್ಷಿಗಳ ವಿಚಾರಣೆ ನಡೆಸಲಿದೆ. ಅಂದು ಲಾಲು ಅವರು ಹಾಜರಾಗಬೇಕಾಗಿಲ್ಲ. ಆದರೆ ನ್ಯಾಯಾಲಯ ಹೇಳಿದಾಗ ಅವರು ಹಾಜರಾಗುತ್ತದೆ ಎಂದು ಲಾಲು ಪ್ರಸಾದ್‌ ಅವರ ಪರ ವಕೀಲ ಸುಧೀರ್‌ ಸಿನ್ಹಾ ವರದಿಗಾರರಿಗೆ ತಿಳಿಸಿದರು.

ADVERTISEMENT

ಬಂಕಾ ಜಿಲ್ಲೆಯ ಖಜಾನೆಯಿಂದ ಸುಮಾರು ₹ 1 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಆರೋಪದ ಮೇಲೆ ಲಾಲು ಅವರಿಗೆ ಸಮನ್ಸ್‌ ನೀಡಲಾಗಿತ್ತು.

1990ರ ದಶಕದಲ್ಲಿ ಅವರು ಅಧಿಕಾರದಲ್ಲಿದ್ದಾಗ ಅವಿಭಜಿತ ಬಿಹಾರದ ಜಾರ್ಖಂಡ್‌ನ ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿದ ಇದೇ ರೀತಿಯ ಪ್ರಕರಣಗಳಲ್ಲಿ ಅವರು ಅಪರಾಧಿ ಆಗಿದ್ದಾರೆ.ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ದೆಹಲಿಯಲ್ಲಿ ಹಿರಿಯ ಮಗಳ ಮನೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.