ಗೊಂಡಾ: ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್, ಅವರ ಪ್ರತಿನಿಧಿ ರಾಜೇಶ್ ಸಿಂಗ್ ಮತ್ತು ಇತರೆ ಮೂವರು ಆರೋಪಿಗಳ ವಿರುದ್ಧ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ.
ಇಲ್ಲಿನ ಸಂಸದರು, ಶಾಸಕರ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಪೇಕ್ಷಾ ಸಿಂಗ್ ಅವರು, ಕೀರ್ತಿವರ್ಧನ್ ಸಿಂಗ್, ರಾಜೇಶ್ ಸಿಂಗ್, ಪಿಂಕು ಸಿಂಗ್, ಸಹದೇವ್ ಯಾದವ್ ಮತ್ತು ಕಾಂತಿ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮನ್ಕಾಪುರ ಠಾಣಾಧಿಕಾರಿಗೆ ಸೂಚಿಸಿದ್ದಾರೆ.
ಕೀರ್ತಿವರ್ಧನ್ ಸಿಂಗ್ ವಿರುದ್ಧ ಮನ್ಕಾಪುರ ಬಿಟೊರಾದ ನಿವಾಸಿ ಅಜಯ್ ಸಿಂಗ್ ಎಂಬುವರು ದೂರು ನೀಡಿದ್ದರು. ತಮ್ಮ ಪತ್ನಿ ಹೆಸರಿನಲ್ಲಿ ನೋಂದಣಿ ಆಗಿದ್ದ ಜಮೀನನ್ನು ಆರೋಪಿಗಳು ಅಕ್ರಮವಾಗಿ ಇನ್ನೊಬ್ಬರು ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.